ಸಿಎಂ ವಿಶ್ರಾಂತಿ ಪಡೆಯಲಿರುವ ರೆಸಾರ್ಟ್ ವಿಶೇಷತೆ ಏನು? 1 ದಿನದ ಬಾಡಿಗೆ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಎಲ್ಲೆಡೆ ಜನರು ನೀರಿಗಾಗಿ ಹಾಹಕಾರ ಕೇಳಿಬರುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ರೆಸಾರ್ಟ್‍ನಲ್ಲಿ ಕಾಲ ಕಳೆಯಲು ಮುಂದಾಗಿದ್ದಾರೆ.

ಕಾಪು ರೆಸಾರ್ಟ್, ಟೆಂಪಲ್ ರನ್ ಬಳಿಕ ಸಿಎಂ ಮತ್ತೆ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಇಬ್ಬನಿ ರಾಯಲ್ ರೆಸಾರ್ಟಿನಲ್ಲಿ ಶನಿವಾರದಿಂದ 2 ದಿನ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ.

ಈ ರೆಸಾರ್ಟಿನಲ್ಲಿ ಒಂದು ದಿನಕ್ಕೆ ಕೊಠಡಿ ಬೆಲೆ 40 ಸಾವಿರ ರೂ. ಆಗಿದ್ದು, ಕುಮಾರಸ್ವಾಮಿ ಒಟ್ಟು 4 ರೂಮ್‍ಗಳನ್ನು ಬುಕ್ ಮಾಡಿದ್ದಾರೆ. 2 ದಿನದ ವಿಶ್ರಾಂತಿಗೆ ಸಿಎಂ 2 ಲಕ್ಷದ ತನಕ ಖರ್ಚು ಮಾಡಲಿದ್ದಾರೆ.

ಈ ರೆಸಾರ್ಟ್ ನ ವಿಶೇಷ ಏನೆಂದರೆ, ರೂಮ್ ಒಳಗೆ ಪ್ರೈವೇಟ್ ಬಾರ್, ಪ್ರತ್ಯೇಕ ಸ್ವಿಮ್ಮಿಂಗ್ ಫುಲ್, ಪ್ರತ್ಯೇಕ ಬಾಲ್ಕನಿ, ಜಕೂಜಿ (ಸ್ಪೆಷಲ್ ವಾಟರ್ ಮಸಾಜ್ ಟಬ್) ಜೊತೆಗೆ ಓಪನ್ ಶವರ್, ಬೇಜಾರಾದ್ರೆ ಬೋಟಿಂಗ್‍ಗೆ ಹೋಗಿ ಮೀನು ಹಿಡಿದು ತಿನ್ನಲೂಬಹುದು.

ಜನರ ಆಕ್ರೋಶ:
ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗಲೂ ಸಿಎಂ ಟೆಂಪಲ್ ರನ್, ರೆಸಾರ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಲಾಗದಿದ್ರೆ ಸೀಟಿನಿಂದ ಕೆಳಗೆ ಇಳಿರೀ ಸ್ವಾಮಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಮತ್ತೆ ಕೆಲವರು ಸಿಎಂಗೆ ಮಗನ ಗೆಲುವು, ಕುರ್ಚಿ ಉಳಿಸಿಕೊಳ್ಳೋದು ಮುಖ್ಯ. ರೈತರ ಗೋಳಲ್ಲ ಎಂದು ತಮ್ಮ ಸಿಟ್ಟುನ್ನು ಹೊರಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ