ಫಲಿತಾಂಶಕ್ಕೂ ಮುನ್ನವೇ ಮಂಡ್ಯ ರಾಜಕಾರಣದಲ್ಲಿ ನಿಖಿಲ್ ಸಕ್ರಿಯ

ಮಂಡ್ಯ: ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ಕೊಡುತ್ತಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಸಭೆಗೆ ಇಂದು ಮಂಡ್ಯದ ಕೆ.ಆರ್ ಪೇಟೆಗೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಕೆ.ಆರ್ ಪೇಟೆ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಪಕ್ಷದ ಪೂರ್ವಭಾವಿ ಸಭೆ ನಡೆಯಲಿದೆ. ಮಂಡ್ಯ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ ನೇತೃತ್ವದಲ್ಲಿ ಜೆಡಿಎಸ್ ಸಭೆ ನಡೆಯಲಿದೆ.

ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಸಭೆಯಲ್ಲಿ ಪ್ರಥಮವಾಗಿ ನಿಖಿಲ್ ಪಾಲ್ಗೊಳ್ಳುತ್ತಿದ್ದಾರೆ. ಚುನಾವಣೆ ನಂತರ ಔಪಚಾರಿಕವಾಗಿ ಒಮ್ಮೆ ಮಂಡ್ಯಕ್ಕೆ ಆಗಮಿಸಿ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ನಿಖಿಲ್ ಕೃತಜ್ಞತೆ ಸಲ್ಲಿಸಿದ್ದರು. ಬಳಿಕ ಮತ್ತೆ ಮಂಡ್ಯಗೆ ಬಂದಿರಲಿಲ್ಲ.

ಚುನಾವಣೆಯ ಸಮಯದಲ್ಲಿ ನಾನು ಸೋಲಲಿ ಗೆಲ್ಲಲಿ ನಿಮ್ಮೊಂದಿಗೆ ಇರುತ್ತೇನೆ ಎಂದು ನಿಖಿಲ್ ಹೇಳಿದ್ದರು. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಸಭೆಗೆ ನಿಖಿಲ್ ಆಗಮಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ