ಆಂತರಿಕ ಕಚ್ಚಾಟದಿಂದ ಮೈತ್ರಿ ಸರ್ಕಾರ ಬೀಳುವುದು ಖಂಡಿತ-ಸಂಸದೆ ಶೋಭಾ ಕರಂದ್ಲಾಜೆ

ಹುಬ್ಬಳ್ಳಿ,ಮೇ.10- ರಾಜ್ಯದ ಮೈತ್ರಿ ಸರ್ಕಾರ ಬಿದ್ದರೆ ಅದು ಅವರ ಪಾಪದ ಕಾರ್ಯಗಳಿಂದಲೇ ಕುಸಿದು ಬೀಳುವುದು. ಇದರಲ್ಲಿ ಬಿಜೆಪಿ ಪಾತ್ರ ಇರುವುದಿಲ್ಲ.

ಮೈತ್ರಿ ಪಕ್ಷಗಳ ಒಳಗೊಳಗೆ ಆಂತರಿಕ ಕಚ್ಚಾಟ, ಇಬ್ಬರಲ್ಲಿ ಯಾರು ಮೇಲುಗೈ ಸಾಧಿಸಬೇಕೆಂಬ ಹಠದಿಂದಲೇ ಮೈತ್ರಿ ಸರ್ಕಾರ ಬೀಳುವುದು ಖಂಡಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು. ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಗೋವುಗಳಿಗೆ ಮೇವು ಇಲ್ಲಾ. ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಜೆಡಿಎಸ್ – ಕಾಂಗ್ರೆಸ್ ಪಕ್ಷದ ಹಲವಾರು ಮಂತ್ರಿಗಳು, ಮುಖ್ಯಮಂತ್ರಿಗಳ ಸಹಿತ ರೆಸಾರ್ಟ್ ನಲ್ಲಿದ್ದಾರೆ.ಅವರು ಲೋಕಸಭೆ ಚುನಾವಣೆ ನಂತರ ರೆಸಾರ್ಟ್ ನ ಮೂಢನಿಂದ ಆಚೆ ಬಂದಿಲ್ಲ.

ರಾಜ್ಯದ ಜನ ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾತ್ರ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ ಎಂದರು.

ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯವನ್ನು ಉತ್ತರ ಕರ್ನಾಟಕದಲ್ಲಿ ಮಾಡಿಲ್ಲ. ಒಂದು ರೀತಿಯಲ್ಲಿ ಉತ್ತರ ಕರ್ನಾಟಕವನ್ನು ಮೈತ್ರಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಸಿಎಂ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಹುಬ್ಬಳ್ಳಿಗೆ ಬಂದು ಮನೆ ಮಾಡಿ ಉತ್ತರ ಕರ್ನಾಟಕದಲ್ಲಿಯೇ ನಾನು ಇರವೆ ಎಂದು ಹೇಳಿದರು. ಆದರೆ ಚುನಾವಣೆ ಮುಗಿದ ತಕ್ಷಣ ಉತ್ತರ ಕರ್ನಾಟಕಕ್ಕೆ ಅವಮಾನ ಮಾಡುವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಎಸ್ ವೈಗೆ ಮತ್ತಷ್ಟು ಬಲ ಬರಲಿದೆ
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಚಿಂಚೋಳಿ, ಕುಂದಗೋಳ ಎರಡು ಕಡೆ ಕೂಡಾ ಬಿಜೆಪಿ ಬಹುದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಲೋಕಸಭೆ ಕ್ಷೇತ್ರವನ್ನು ಗೆಲುವು ಸಾಧಿಸಲಿದ್ದೇವೆ. ಈ ಮೂಲಕ ಯಡಿಯೂರಪ್ಪನವರ ಬಲದ ಶಕ್ತಿ ಹೆಚ್ಚಿಗೆ ಆಗಲಿದೆ. ಬರುವಂತಹ ದಿನಗಳಲ್ಲಿ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಆಗುವುದು. ಇದು ಬಿಜೆಪಿ ಕಾರಣಕ್ಕೆ ಅಲ್ಲಾ. ಪರಸ್ಪರ ಕಾಂಗ್ರೆಸ್ – ಜೆಡಿಎಸ್ ಆಂತರಿಕ ಜಗಳದಿಂದ ಇದು ಕಾಂಗ್ರೆಸ್ ನ ಶಾಸಕರಿಗೆ ಕಾಡುತ್ತಿದೆ. ಚಿಕ್ಕನಗೌಡರ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ಬೃಹತ್ ಅಂತರದಿಂದ ಗೆಲುವು ಸಾಧಿಸಿ ಯಡಿಯೂರಪ್ಪ ನವರಿಗೆ ಮತ್ತೊಬ್ಬ ಶಾಸಕ ಸಿಗಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸಿಎಂಗೆ ಮಂತ್ರಿ, ಸಿಎಂ ವಿಚಾರದೇ ಚಿಂತೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲವಿದೆ. ಪರಸ್ಪರರ ಬಗ್ಗೆ ನೋವು, ಸಿಟ್ಟು ಇದೆ. 80 ಸೀಟು ಗೆದ್ದ ಕಾಂಗ್ರೆಸ್ ನವರು 37 ಸ್ಥಾನ ಗೆಲುವು ಸಾಧಿಸಿದ ಜೆಡಿಎಸ್‍ಗೆ ಮಂಡಿಯುರಿ ಕೂರುವಂತಹ ಪರಿಸ್ಥಿತಿ ಇದೆ ಅದಕ್ಕಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬರುವಂತಹ ದಿನಗಳಲ್ಲಿ ಎಲ್ಲ ಶಾಸಕರು ಬಂಡಾಯ ಎದ್ದರು ಆಶ್ಚರ್ಯ ಇಲ್ಲಾ. ಹೀಗಾಗಿಯೇ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅವರ ಬೆಂಬಲಿಗರು ಇದೇ ಮಾತು ಹೇಳುತ್ತಿದ್ದಾರೆ. ಅದಕ್ಕಾಗಿ ಸಿಎಂ ರಾಜ್ಯದ ಅಭಿವೃದ್ಧಿ ಕಾರ್ಯ ಮಾಡುವುದನ್ನು ಬಿಟ್ಟು ಅವರನ್ನು ಮನವೊಲಿಕೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ