ಪ್ರಚಾರದಿಂದ ದೂರ ಉಳಿದಿರುವ ಸಂತೋಷ್ ಲಾಡ್

ಹುಬ್ಬಳ್ಳಿ, ಮೇ 9- ಕುಂದಗೋಳ ಉಪಚುನಾವಣೆ ಸಹ ಉಸ್ತುವಾರಿ ಹೊಣೆ ಹೊತ್ತಿರುವ ಸಂತೋಷ್‍ಲಾಡ್ ಪ್ರಚಾರದಿಂದ ದೂರ ಉಳಿದಿದ್ದಾರೆ.

ಸಂತೋಷ್‍ಲಾಡ್ ಅವರನ್ನು ಉಪಚುನಾವಣೆಯ ಸಹ ಉಸ್ತುವಾರಿಯನ್ನಾಗಿ ಹೈಕಮಾಂಡ್ ನೇಮಕ ಮಾಡಿತ್ತು. ಉಸ್ತುವಾರಿ ಹೊಣೆ ಹೊತ್ತವರೆಲ್ಲ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದರು.

ಹೈಕಮಾಂಡ್ ಸೂಚನೆಗೆ ಕ್ಯಾರೆ ಎನ್ನದೆ ಸಂತೋಷ್‍ಲಾಡ್ ಪ್ರಚಾರ ಕಣದಿಂದ ದೂರವೇ ಉಳಿದಿದ್ದಾರೆ. ಇನ್ನೂ ಕುಂದಗೋಳ ಕಡೆಗೆ ಸುಳಿದಿಲ್ಲ. ಇವರಷ್ಟೇ ಅಲ್ಲ, ಇನ್ನೂ ಹಲವು ಶಾಸಕರು ಕುಂದಗೋಳ ಕ್ಷೇತ್ರದ ಕಡೆ ತಲೆ ಹಾಕಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ತಲೆನೋವಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ