ಬಾಲಕಿ ಮೇಲೆ ದಾಳಿ ನಡೆಸಿದ ನಾಯಿಗಳು

ಮಂಡ್ಯ, ಮೇ 9- ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳು ಎರಗಿ ಕಚ್ಚಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಡೆದಿದೆ.
ಹರ್ಷಿತ (12) ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡ ಬಾಲಕಿ.

ಜೆಲ್ಲಿಕ್ರಷರ್ ಕೆಲಸದವರು ಸಾಕಿದ ನಾಯಿಗಳು ಬಾಲಕಿಯ ಮೇಲೆ ದಾಳಿ ಮಾಡಿದ್ದು, ಬಾಲಕಿ ಚೀರಿಕೊಂಡಾಗ ಗ್ರಾಮಸ್ಥರು ಆಕೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಕ್ರೋಶ:
ಒಂದು ಕಡೆ ಜೆಲ್ಲಿಕ್ರಷರ್‍ನಿಂದ ಧೂಳು, ಶಬ್ಧದ ಹಾವಳಿಯಾದರೆ, ಮತ್ತೊಂದಡೆ ಅಲ್ಲಿ ಸಾಕಿರುವ ನಾಯಿಗಳ ಹಾವಳಿಯಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ.

ಗ್ರಾಮಸ್ಥರು ಜಮೀನು ಕಡೆ ಹೋಗಲು ಭಯಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ