ಬೆಂಗಳೂರು,ಮೇ7- ಡಾ.ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ತನ್ನ 28ನೇ ವಾರ್ಷಿಕೋತ್ಸವ ಹಾಗೂ ಇಂದಿರಾನಗರದಲ್ಲಿರುವ ಶಾಖೆಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಸೆಂಟರ್ನ ಸಂಸ್ಥಾಪಕಿ ಮತ್ತು ಐಎಫ್ ತಜ್ಞೆ ಡಾ.ಪಿ.ರಮಾದೇ , ಕಳೆದ 27 ವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ಡಾ.ರಮಾಸ್ ಇನ್ಸ್ಟಿಟ್ಯೂಟ್ ಫಾರ್ ಫರ್ಟಿಲಿಟಿ ಸೆಂಟರ್ ಆರಂಭಿಸಿದ್ದೆವು. ಅದು ಇದೇ ದಿನವಾದ್ದರಿಂದ ರಮಾಸ್ನ 28ನೇ ವರ್ಷಾಚರಣೆಯೂ ಆಗಿದೆ ಎಂದು ಹೇಳಿದರು.
ಬಂಜೆತನವೆಂಬುದು ಬಹು ದೊಡ್ಡ ಸಮಸ್ಯೆಯೇನಲ. ಇದು ಕೇವಲ ಮಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಕಂಡುಬರುತ್ತದೆ.ಈ ಗರ್ಭಕೋಶದ ಸಮಸ್ಯೆಗಳು ಐಎಫ್ ಚಿಕಿತ್ಸಯಿಂದ ಮಾತ್ರವಲ್ಲ ಆಹಾರ ಶೈಲಿ, ಆರೋಗ್ಯಕರ ವಾತಾವವರಣ, ಒತ್ತಡ ನಿಯಂತ್ರಣ, ಯೋಗ, ಧ್ಯಾನ, ವ್ಯಾಯಾಮದಿಂದಲೂ ಸರಿಪಡಿಸಬಹುದು ಎಂದು ಸಲಹೆ ನೀಡಿದರು.
ಸೆಂಟರ್ನ ಸಿಇಒ ಡಾ.ರಾಖಿ ಮಿಶ್ರಾ ಮಾತನಾಡಿ, ಜೀವನದಲ್ಲಿ ದೈನಂದಿನ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಹಾಗೆಂದು ಸಂಬಂಧಗಳ ಬಗ್ಗೆ ಅಸಡ್ಡೆ, ಪತಿ-ಪತ್ನಿ ಹೊಂದಾಣಿಕೆಯಲ್ಲಿ ಕೊರತೆ, ಪರಿಸರ ಮಾಲಿನ್ಯ ಸೇರಿದಂತೆ ಹಲವಾರು ಕಾರಣಗಳಿಂದಲೂ ಗರ್ಭಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ ಉಂಟು.ಇದಕ್ಕಾಗಿ ಚಿಂತಿಸುವ ಅಗತ್ಯವೇನಿಲ್ಲ. ತಜ್ಞ ವೈದ್ಯರ ಸಲಹೆ ಮತ್ತು ಸೂಕ್ತ ಚಿಕಿತ್ಸೆ ಪಡೆದರೆ ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದರು.
ಬಂಜೆತನಕ್ಕೆ ಚಿಕಿತ್ಸೆ ನೀಡುವುದಷ್ಟೇ ತಜ್ಞರ ಕೆಲಸವಲ್ಲ. ಚಿಕಿತ್ಸೆ ಪಡೆದ ಮಳೆ ಅಥವಾ ಪುರುಷನು ಆರೋಗ್ಯಕರ ಹಾಗೂ ಸಮರಸ ಜೀವನದ ನಡೆಸುವಂತೆ ಸಲಹೆ ನೀಡುವುದು, ಗರ್ಭ ಧರಿಸಿದ ಸ್ತ್ರೀಯ ಆರೋಗ್ಯ ಕಾಪಾಡುವುದು, ಗರ್ಭದಲ್ಲಿ ಬೆಳೆಯುತ್ತಿರುವ ಮಗುನ ರಕ್ಷಣೆ ಮಾಡುವುದು ಹಾಗೂ ಕೂಸು ಹುಟ್ಟಿದ ನಂತರ ಯೋಗಕ್ಷೇಮ ನೋಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಪರಿಪೂರ್ಣ ಅರ್ಥ ಕಲ್ಪಿಸುವ ಕರ್ತವ್ಯವೈ ಅವರದ್ದಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.