ಬೆಂಗಳೂರು: ಮೊಬೈಲ್ ಚಾರ್ಜ್ಗೆ ಹಾಕಿ ದೂರವಾಣಿ ಕರೆ ಮಾಡುವವರಿದ್ದಾರೆ. ಆದರೆ ಇದು, ಎಷ್ಟು ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಚಾರ್ಜ್ ಹಾಕಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ದೀಢೀರನೆ ಸ್ಫೋಟಗೊಂಡಿದೆ. ಇದರಿಂದ ಬಳಕೆದಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಏಪ್ರಿಲ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೊಬೈಲ್ ಚಾರ್ಜ್ ಹಾಕಿ ತನ್ನ ಸಹೋದ್ಯೋಗಿಗೆ ವಿಡಿಯೋ ಕಾಲ್ ಮಾಡಿದ್ದ. ಈ ವೇಳೆ ಕೆಲ ಹೊತ್ತು ಮಾತನಾಡಿದ್ದಾನೆ ಕೂಡ. ಆದರೆ, ಇದಕ್ಕಿದ್ದಂತೆ ಮಾತನಾಡುತ್ತಿರುವಾಗಲೇ ಮೊಬೈಲ್ ಬ್ಲಾಸ್ಟ್ ಆಗಿದೆ.
ಮೊಬೈಲ್ ಬ್ಲಾಸ್ಟ್ ಆಗುತ್ತಿದ್ದಂತೆ ಯುವಕನ ಸ್ನೇಹಿತರು ಶಾಕ್ ಆಗಿದ್ದಾರೆ. ಈ ವೇಳೆ ಯುವಕನ ಕೈಗೆ ಗಾಯಗಳಾಗಿದ್ದವು. ಗಾಯಗೊಂಡ ಯುವಕನನ್ನು ವೈದೇಹಿ ಆಸ್ಪತ್ರಗೆ ದಾಖಲು ಮಾಡಲಾಯಿತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಯುವಕ ಮೂರು ಬೆರಳು ಕಳೆದುಕೊಂಡಿದ್ದಾನೆ. ಸದ್ಯ, ಆತ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.