
ಬೆಂಗಳೂರು 1 ಮೇ: ಕಲಾಸೌಧ ಎಂದು ಕರೆಯಲ್ಪಡುವ ಸಂಗೀತ, ಕಲೆ ಮತ್ತು ನೃತ್ಯ ಅಕಾಡೆಮಿ ಕಟ್ಟಡದ ಮಾದರಿಯನ್ನು ನಿನ್ನೆ ಅರಳುಮಲ್ಲಿಗೆ ಪಾರ್ಥಸಾರಥಿ, ಚಿನಾತಪಲ್ಲಿ ವಿಧ್ವಾನ್ ಡಾ. ವಿ. ಶ್ರೀನಿವಾಸ್, ಪ್ರಶಸ್ತಿ ವಿಜೇತ ಕಲಾವಿದ ಶ್ರೀ ರವಿ ಕೋಟೆಗಡ್ಡೆ, ವಿದುಷಿ ಪ್ರಭಾ ಕಿಣಿ , ಶ್ರೀ ನಾಥನ್ ಮತ್ತು ಶ್ರೀ ಗುಂಡುರಾವ್ ರವರು ಅನಾವರಣಿಸಿದರು
ರುದ್ರ ವೀಣಾ ಆಕಾರದಲ್ಲಿರುವ ಕಲಾಸೌಧದ ಮಿನಿಯೇಚರ್ ಮಾದರಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಕಲಾಸೌಧ M-A-D [ಮ್ಯೂಸಿಕ್ – ಆರ್ಟ್ – ಡಾನ್ಸ್] ಅಂತರರಾಷ್ಟ್ರೀಯ ಅಕಾಡೆಮಿ ಆಗಿ ಸ್ಥಾಪನೆಯಾಗುತ್ತದೆ. ಅನೇಕ ವಿಧ್ವಾನ ಮತ್ತು ವಿಧುಶಿಗಳಿಗೆ ಆಶ್ರಯ ನೀಡಿ, ಸುಮಾರು 1000 ವಿದ್ಯಾರ್ಥಿಗಳಿಗೆ ಭಾರತೀಯ ಕಲೆ ಮತ್ತು ಸಂಗೀತವನ್ನು ಗುರುಕುಲ ವ್ಯವಸ್ಥೆಯಲ್ಲಿ ಕಲಿಸುವುದು ಕಲಾಸೌಧದ ಉದ್ದೇಶವಾಗಿರುತ್ತದೆ.
ಪ್ರಸ್ತುತ ನಾಗಮಂಗಲ ಬಳಿ 5 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು ಕೆಲಸ ಪ್ರಾರಂಭಿಸಬೇಕಾಗಿದೆ. ದೇಣಿಗೆಗಳನ್ನು ಪಡೆಯುವ ವಿಧಾನದ ಬಗ್ಗೆ ಮಾತನಾಡುತ್ತಾ ಶ್ರೀ.ಆರ್. ನಾಥನ್ “ನಾವು ದೊಡ್ಡ ದೇಣಿಗೆಗಳನ್ನು ಬಯಸುವುದಿಲ್ಲ, ಆದರೆ ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ಬೇಕು.
ಕೇವಲ ರೂ. 1000 ದೇಣಿಗೆಯನ್ನು 10 ಲಕ್ಷ ಜನರಿಂದ ಅಪೇಕ್ಷಿಸುತ್ತಿದ್ದೇವೆ.
ಕಲಾಸೌಧ ಯೋಜನೆಗೆ ದಾನಿಗಳು ಕಲಾಸೌರಭ ಫೌಂಡೇಶನ್ ಅಧ್ಯಕ್ಷರಾದ ಶ್ರೀ ದತ್ತಾತ್ರಿ ಅವರನ್ನು 8105674544 ರಲ್ಲಿ ಸಂಪರ್ಕಿಸಬಹುದು.
ದಾನಿಗಳು 80G ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು