ಬೆಂಗಳೂರು, ಮೇ 1- ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹೀಸುವ ಪ್ರಯತ್ನದಲ್ಲಿ ಹಾಗೂ ಭಾರತದ ಸಮೃದ್ಧ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಭಾರತ ಸರ್ಕಾರದ ಜವಳಿ ಇಲಾಖೆಯ ಸ್ವಾಮ್ಯದ ಹಾಗೂ ಐಎಸ್ಒ 9001 ಮಾನ್ಯತೆ ಪಡೆದಿರುವ ಕಂಪನಿಯಾದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾಪೆರ್ರೇಪೋಷನ್ ಆಫ್ ಇಂಡಿಯಾ(ಸಿಸಿಐಸಿಐ) ಈಗ ಅತ್ಯುತ್ತಮ ಕಾಟನ್(ಹತ್ತಿಯ) ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಬೆಂಗಳೂರಿನ ಎಂಜಿ ರಸ್ತೆ ತಮ್ಮ ಮಳಿಗೆಯಲ್ಲಿ ಮೇ 5ರ ವರೆಗೆ ಆಯೋಜಿಸುತ್ತಿದೆ.
ಕಾರ್ಯಕ್ರಮವನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನ್ಯಾಟ ನೃತ್ಯಗಾರ್ತಿಯಾದ ಸುಶೀಲಾ ಮೆಹ್ತಾ ಅವರು ಉದ್ಘಾಟಿಸಿದರು.
ದೇಶದ ಸಂಸ್ಕøತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ವರ್ಣಿಸುವ ದೇಶದ ಅತ್ಯುತ್ತಮ ಕೈಮಗ್ಗದ ಸೀರೆಗಳು ಇಲ್ಲಿವೆ.
ರಾಜಾಸ್ಥಾನದ ಮುಲ್ ಮತ್ತು ಕೋಟಾದ ಪ್ರಿಂಟೆಡ್ ಕಾಟನ್, ಎಂಪಿಯ ಪ್ರಿಂಟೆಡ್ ಚಂದೇರಿ, ಆಂಧ್ರಪ್ರದೇಶದ ಕಲಂಕಾರಿ ಕಾಟನ್, ಜೈಪುರದ ಇಂಡಿಗೊ ಪ್ರಿಂಟ್ ಸೀರೆಗಳು, ಆಂಧ್ರಪ್ರದೇಶದ ನಾರಾಯಣಪೇಟ ಮತ್ತು ವೆಂಕಟಗಿgರಿ, ತಮಿಳುನಾಡಿನ ಥ್ರೆಡ್ ಎಂಡ್ ಝರಿ ಬಾಡ್ರ್, ಪಶ್ಚಿಮ ಬಂಗಾಳದ ಕೋಲ್ಕತಾ ಕಾಟನ್, ಬನಾರಸ್ ಕಾಟನ್, ಉತ್ತರಪ್ರದೇಶದ ಲಕ್ನೋದ ಎಂಬ್ರಾಯ್ಡರಿ ಕಾಟನ್ ಸೀರೆ ಅಲ್ಲದೆ ಇನ್ನೂ ಹೆಚ್ಚಿನ ಕೈ ಮಗ್ಗ ಮತ್ತು ಕರಕುಶಲ ವಸ್ತುಗಳಿರುತ್ತವೆ.