ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೇಸ್ ಮತ್ತು ಬಿಜೆಪಿ

ಬೆಂಗಳೂರು,ಮೇ1-ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳು ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ.

ಬಿಜೆಪಿ ಈಗಾಗಲೇ ಎರಡೂ ಕ್ಷೇತ್ರಗಳಿಗೂ ಟಿಕೆಟ್ ಘೋಷಿಸಿದ್ದು ನಾಮಪತ್ರ ಸಲ್ಲಿಕೆ ಸಹ ಆಗಿ, ಪ್ರಚಾರ ಕಾರ್ಯ ಆರಂಭಿಸಿದೆ.ಈ ಉಪಚುನಾವಣೆ ಗೆಲವು ಬಿಜೆಪಿಯ ಸಂಖ್ಯಾಬಲ ಹೆಚ್ಚಿಸಿ ಅಧಿಕಾರಕ್ಕೆ ಇನ್ನಷ್ಟು ಹತ್ತಿರ ಮಾಡಲಿದೆ.

ಈ ನಡುವೆ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೂಚನೆಯನ್ನು ರವಾನಿಸಿದ್ದು, ಎರಡೂ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಕಡ್ಡಾಯವಾಗಿ ಎರಡೂ ಕ್ಷೇತ್ರದಲ್ಲಿ ಪ್ರಚಾರ ಮಾಡಲೇ ಬೇಕು ಎಂದಿರುವ ಯಡಿಯೂರಪ್ಪ ಅವರು ದಕ್ಷಿಣದ ಶಾಸಕರು ಹಾಗೂ ಖ್ಯಾತಿ ಹೊಂದಿರುವ ಶಾಸಕರನ್ನು ಸಹ ಕ್ಷೇತ್ರಗಳಿಗೆ ಆಹ್ವಾನಿಸಿದ್ದಾರೆ.

ನೀತಿ ಸಂಹಿತೆ ಇರುವ ಕಾರಣ ಸ್ವಕ್ಷೇತ್ರದಲ್ಲಿ ಇದ್ದರೂ ಸಹ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ, ಬದಲಾಗಿ ಚುನಾವಣಾ ಅಂಗಳಕ್ಕೆ ಬಂದು ಮತದಾರನ ಮನವೊಲಿಸುವ ಯತ್ನ ಮಾಡಲಿ ಎಂಬುದು ಯಡಿಯೂರಪ್ಪ ಆಶಯ.

ಕಾಂಗ್ರೆಸ್ ಸಹ ತನ್ನ ಪ್ರಭಾವಿ ಉತ್ತರ ಕರ್ನಾಟಕ ಶಾಸಕರು, ಮಂತ್ರಿಗಳ ಕೈಗೆ ಚಿಂಚೋಳಿ, ಕುಂದಗೋಳ ಉಪಚುನಾವಣೆ ಉಸ್ತುವಾರಿ ನೀಡಿದ್ದು, ಈಗಾಗಲೇ ಪ್ರಚಾರ ಆರಂಭಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ