ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶದ ದಿನಾಂಕದ ಬಗ್ಗೆ ಅನೇಕರಲ್ಲಿ ಗೊಂದಲ ಉಂಟಾಗಿದೆ. ಈ ಮೊದಲು ಮೇ.2 ಅಥವಾ 3ರಂದು ಫಲಿತಾಂಶ ಹೊರಬೀಳಲಿದೆ ಎನ್ನಲಾಗಿತ್ತು. ಆದರೆ, ಈಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಇಂದೇ ಫಲಿತಾಂಶ ಹೊರಬೀಳಲಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ.
ಎಸ್ಎಸ್ಎಲ್ಸಿ ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇಂದು 12 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ಅವರು ಫಲಿತಾಂಶ ಪ್ರಕಟ ಮಾಡಲಿದ್ದಾರೆ. ನಂತರ ಅದು ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಶಾಲೆಗಳಲ್ಲಿ ಮರುದಿನ ಫಲಿತಾಂಶ ಸಿಗಲಿದೆ ಎಂದು ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. www.kaceb.kar.nic.in ಮತ್ತು www.karresults.nic.in ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ ಈ ಸೈಟ್ ತೆರೆದುಕೊಳ್ಳಲಿದೆ.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. 4,651 ವಿಕಲ ಚೇತನ ಮಕ್ಕಳು ಪರೀಕ್ಷೆ ಬರೆದಿದ್ದರು. 1451 ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯತಿ ನೀಡಲಾಗಿತ್ತು. 480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯ ಬರೆಯುವ ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ರಾಜ್ಯಾದ್ಯಂತ ಶೇ.88.18 ರಷ್ಟು ಎಸ್ಎಸ್ಎಲ್ಸಿ ಫಲಿತಾಂಶ ಬಂದಿತ್ತು. ಉಡುಪಿ ಮೊದಲ ಸ್ಥಾನ ಪಡೆದಿತ್ತು. 2016 ರಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಎಸ್ಎಸ್ಎಲ್ಸಿ ಫಲಿತಾಂಶ ಶೇ.79.16 ರಷ್ಟು ಇತ್ತು. ಆದರೆ 2017 ರಲ್ಲಿ ಶೇ. 67.87 ಕ್ಕೆ ಕುಸಿದಿತ್ತು. ಉಡುಪಿ ಜಿಲ್ಲೆ 2017 ರಿಂದ ಮೊದಲ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಶೇ.74 ರಷ್ಟು ಫಲಿತಾಂಶ ಬಂದರೆ, ನಗರ ಭಾಗದಲ್ಲಿ ಶೇ.69.38 ರಷ್ಟು ಫಲಿತಾಂಶ ಬಂದಿತ್ತು.
ಈ ಸೈಟ್ನಲ್ಲಿ ಫಲಿತಾಂಶ ನೋಡಬಹುದು. www.kaceb.kar.nic.in ಮತ್ತು www.karresults.nic.in ಫಲಿತಾಂಶ ಸಿಗಲಿದೆ.