ಬೆಂಗಳೂರು, ಏ.30- ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಆನೇಕಲ್ನ ಸೆಂಟ್ಫಿಲೊಮಿನ್ ಹೈಸ್ಕೂಲ್ ವಿದ್ಯಾರ್ಥಿನಿ ಸೃಜನಾಗೆ ಶಾಲೆಯ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೃಜನಾ ನಮ್ಮ ಶಾಲೆಯ ವಿದ್ಯಾರ್ಥಿನಿ ಎಂಬುದನ್ನು ಹೇಳಿಕೊಳ್ಳಲು ನಮಗೆ ಹೆಮ್ಮೆ ಎಂದು ಮುಖ್ಯ ಶಿಕ್ಷಕಿ ಉಮಾ ತಿಳಿಸಿದ್ದಾರೆ.
ಸೃಜನಾ ಮೊದಲಿನಿಂದ ನಮ್ಮ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾಳೆ 1 ರಿಂದ 10ನೇ ತರಗತಿ ವರೆಗೂ ಅವಳು ಅತ್ಯುತ್ತಮ ಅಂಕ ಗಳಿಸಿದ್ದಾಳೆ. ಹಾಗಾಗಿ ಎಸ್ಎಸ್ಎಲ್ಸಿಯಲ್ಲೂ ಟಾಪರ್ ಆಗಿ ಬರುತ್ತಾಳೆ ಎಂಬ ನಿರೀಕ್ಷಿಸಿದ್ದೇವು. ನಾವು ಅಂದುಕೊಂಡಂತೆಯೇ ಆಕೆ ಟಾಪರ್ ಆಗಿದ್ದಾಳೆ. ಶಾಲೆ ಮತ್ತು ತಾಲೂಕಿಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದರು.
ಆನೇಕಲ್
ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡುತ್ತಿರುವ ಶಾಲಾ ಸಿಬ್ಬಂದಿ
ಸೆಂಟ್ ಪಿಲೋಮಿನಾ ಶಾಲೆಯಲ್ಲಿ ಹಬ್ಬದ ವಾತಾವರಣ
ಸುಧಾಮಣಿ ಸೃಜನಾ ಕ್ಲಾಸ್ ಟೀಚರ್