ಬಾಗ್ದಾದ್: ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್ ಅಲ್-ಬಾಗ್ದಾದಿ ಹೇಳಿದ್ದಾನೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಇಸಿಸ್, ವಿಡಿಯೋದಲ್ಲಿ ತನ್ನ ಸಂಘಟನೆ ಮುಖ್ಯಸ್ಥ ಅಬೂ ಬಕರ್ ಅಲ್-ಬಾಗ್ದಾದಿ ಮೂಲಕ ಹೇಳಿಕೆ ಕೊಡಿಸಿದೆ. ಈ ಹಿಂದೆ ಅಮೆರಿಕ ವಾಯು ಸೇನೆಯ ಡ್ರೋಣ್ ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತಾದರೂ, ಆತ ಸಾವನ್ನಪ್ಪಿಲ್ಲ ಇನ್ನೂ ಜೀವಂತವಾಗಿದ್ದಾನೆ ಎಂದು ತಿಳಿದುಬಂದಿದೆ.
ಇಸಿಸ್ ನ ಈ ವಿಡಿಯೋದಲ್ಲಿ ಅರೇಬಿಕ್ ಭಾಷೆಯಲ್ಲಿ ಮಾತನಾಡಿರುವ ಬಾಗ್ದಾದಿ ಶ್ರೀಲಂಕಾದ ದಾಳಿಯ ಕುರಿತೂ ಉಲ್ಲೇಖಿಸಿದ್ದು, ಸಿರಿಯಾದಲ್ಲಿನ ಇಸಿಸ್ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
‘ಬಘೌಝ್ ನ ಯುದ್ಧ ಇಲ್ಲಿಗೆ ಮುಕ್ತಾಯವಾಗಿದೆ. ಶ್ರೀಲಂಕಾದಲ್ಲಿ ನಡೆಸಿದ ಸರಣಿ ದಾಳಿಯೂ ಈ ಬಘೌಝ್ ದಾಳಿಗೆ ಪ್ರತಿಕಾರವಾಗಿದೆ. ಪಶ್ಚಿಮ ರಾಷ್ಟ್ರಗಳ ವಿರುದ್ಧ ಯುದ್ಧ ಸುದೀರ್ಘವಾಗಿದೆ. ಹಾಗೂ ಮೃತಪಟ್ಟಿರುವ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧ ಮುಂದುವರೆಯಲಿದೆ ಎಂದು ಬಾಗ್ದಾದಿ ಎಚ್ಚರಿಸಿದ್ದಾನೆ. ಇನ್ನು ಈ ವಿಡಿಯೋ ಹೊರಬರುತ್ತಿದ್ದಂತೆ ಎಸ್ ಐಟಿ ತಂಡ ಹಾಗೂ ಇರಾಕ್ ನ ತಜ್ಞರ ತಂಡ ಈತ ಬಾಗ್ದಾದಿಯೇ ಅನ್ನೋದನ್ನೂ ಖಚಿತ ಪಡಿಸಿದೆ.