![dead-body](http://kannada.vartamitra.com/wp-content/uploads/2018/03/dead-body-546x381.jpg)
ಬೆಂಗಳೂರು ಏ.30-ಖಾಲಿ ನಿವೇಶನವೊಂದರ ಬಳಿ ಅಪರಿಚಿತ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಈತನನ್ನು ಬೀರು ಬಾಟಲಿಯಿಂದಒಡೆದು ಕೊಲೆ ಮಾಡಿರುವಘಟನೆ ಮೈಕೋಲೇಔಟ್ ಪೆÇಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಾಬ್ಯಾಂಕ್ ಲೇಔಟ್ನಆರ್ಟಿಒಕಚೇರಿ ಸಮೀಪದ ಖಾಲಿ ನಿವೇಶನದ ಬಳಿ ಮಂಜುನಾಥ್ಎಂಬಾತನ ಶವ ಪತ್ತೆಯಾಗಿದೆ. ಏ.25ರಂದು ಸಂಜೆ 6.30ರಲ್ಲಿ ಹೊರಗೆ ಹೋಗಿದ್ದಈತ ಮನೆಗೆ ಹಿಂತಿರುಗಿರಲಿಲ್ಲ.
ರಾತ್ರಿಈತನ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಈತನನ್ನು ಬೀರ್ ಬಾಟಲಿಯಿಂದಒಡೆದು ಕೊಲೆ ಮಾಡಿರುವುದು ಪ್ರಾಥಮಿಕತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಮೈಕೋಲೇಔಟ್ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.