ಕಳ್ಳರಿಂದ ಮನೆ ಬೀಗ ಒಡೆದು ಚಿನ್ನಾಭರಣ ದರೋಡೆ

ಬೆಂಗಳೂರು ಏ.30-ಕುಟುಂಬದವರೆಲ್ಲಾ ಊರಿಗೆತೆರಳಿದಾಗ ಮನೆಯ ನೀಗ ಒಡೆದು ಒಳನುಗ್ಗಿದ ಚೋರರು ಬೀರುವನ್ನುಒಡೆದುಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ದೋಚಿರುವಘಟನೆ ಹೆಣ್ಣೂರು ಪೆÇಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಬೂಸಾಬ್‍ಪಾಳ್ಯ, 2ನೇ ಕ್ರಾಸ್, ಬಾಲಾಜಿ ಲೇಔಟ್‍ನ ನಿವಾಸಿ ಚಂಗಪ್ಪಎಂಬುವರು ಏ.26ರಂದು ಕುಟುಂಬದವರೊಂದಿಗೆಊರಿಗೆ ತೆರಳಿದ್ದರು.
ಈ ವೇಳೆ ಕಳ್ಳರು ಇವರ ಮನೆ ಬೀಗ ಒಡೆದು ಒಳನುಗ್ಗಿ ಸುಮಾರು 4.50 ಲಕ್ಷರೂ.ಮೌಲ್ಯದಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ.
ನಿನ್ನೆಚಂಗಪ್ಪಕುಟುಂಬದವರು ಮನೆಗೆ ವಾಪಸ್ಸಾದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ತಕ್ಷಣ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹೆಣ್ಣೂರುಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ