ಹಾಸನ, ಏ.30- ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿದ್ದ ಯುವಕನ ಮೃತ ದೇಹ ತಾಲ್ಲೂಕಿನ ಬಾಗೇವಾಳು ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಕಾಮೇನಹಳ್ಳಿ ನಿವಾಸಿ ಮಂಜೇಗೌಡ (28) ಮೃತ ಯುವಕ.
ಮೃತ ಯುವಕ ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು , ಈ ಸಂಬಂಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು , ಈಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತನ ಬಟ್ಟೆಗಳನ್ನು ನೋಡಿ ಸಂಬಂಧಿಕರು ಪತ್ತೆ ಹಚ್ಚಿದ್ದಾರೆ. ಯಾರೋ ಕೊಲೆ ಮಾಡಿ ಇಲ್ಲಿ ತಂದು ಹಾಕಿರುವ ಸಂಶಯ ವ್ಯಕ್ತವಾಗಿದೆ.
ಈ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.