ಸಾಧ್ವಿ ಪ್ರಜ್ನಾ ಸಿಂಗ್ ಹೇಳಿಕೆಗೆ ಹೇಮಂತ್​ ಕರ್ಕರೆ ಪುತ್ರಿಯ ತಿರುಗೇಟು

ನವದೆಹಲಿ: ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಹೇಮಂತ್​ ಕರ್ಕರೆ ಸಾವನ್ನಪ್ಪಿದ್ದು, ತಮ್ಮ ಶಾಪದಿಂದಲೇ ಎಂಬ ಹೇಳಿಕೆ ನೀಡಿದ್ದ ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ನಾ ಸಿಂಗ್ ಠಾಕೂರ್ ಹೇಳಿಕೆಗೆ ತಿರುಗೇಟು ನೀಡಿರುವ ಹೇಮಂತ್ ಕರ್ಕರೆ ಪುತ್ರಿ ಜೂಯಿ ನೇವಾರೆ, ನನ್ನ ತಂದೆ ಈ ನಗರ, ಈ ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ನೀಡಿದ್ದಾರೆ ಎಂದು ಹೇಳಿದ್ದಾರೆ.

11 ವರ್ಷಗಳ ಬಳಿಕ ತಮ್ಮ ತಂದೆಯ ಬಗ್ಗೆ ಮೌನ ಮುರಿದಿರುವ ಜೂಯಿ ನೆವಾರೆ, ನನ್ನ ತಂದೆ ಸುಮ್ಮನೆ ಮೃತಪಟ್ಟಿಲ್ಲ. ಈ ನಗರ, ಈ ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ನೀಡಿದ್ದಾರೆ. ಅವರಿಗೆ ಕುಟುಂಬ, ಸ್ವಂತ ಜೀವನಕ್ಕಿಂತ ಸಮವಸ್ತ್ರ, ಕರ್ತವ್ಯವೇ ಮುಖ್ಯವಾಗಿತ್ತು ಎಂದಿದ್ದಾರೆ.

ಇದೇ ವೇಳೆ ನಾನು ಪ್ರಜ್ಞಾ ಅವರನ್ನಾಗಲೀ, ಅವರ ಹೇಳಿಕೆಯನ್ನಾಗಲಿ ಗೌರವಿಸುವುದಿಲ್ಲ. ನಾನು ಹೇಮಂತ್​ ಕರ್ಕರೆಯವರ ಬಗ್ಗೆ ಮಾತ್ರ ಮಾತನಾಡಲು ಇಷ್ಟಪಡುತ್ತೇನೆ. ಅವರು ನಮಗೆಲ್ಲ ಮಾದರಿ. ತುಂಬ ಗೌರವದೊಂದಿಗೆ ಅವರ ಹೆಸರನ್ನು ಪ್ರಸ್ತಾಪಿಸಬೇಕು ಎಂದು ತಿಳಿಸಿದ್ದಾರೆ.

ಭಯೋತ್ಪಾದಕತೆಗೆ ಯಾವುದೇ ಧರ್ಮವಿಲ್ಲ. ಯಾವುದೇ ಧರ್ಮವೂ ಇನ್ನೊಬ್ಬರ ಹತ್ಯೆ ಮಾಡುವುದನ್ನು ಬೋಧಿಸುವುದಿಲ್ಲ ಎಂಬುದನ್ನು ನನ್ನ ತಂದೆ ಹೇಳುತ್ತಿದ್ದರು. ಅವರ 24 ವರ್ಷಗಳ ವೃತ್ತಿ ಜೀವನದಲ್ಲಿ ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಸಾವೂ ಕೂಡ ಮತ್ತೊಬ್ಬರ ರಕ್ಷಣೆಗಾಗಿಯೇ ಆಗಿದ್ದು ಎಂದಿದ್ದಾರೆ.

Karkare’s daughter breaks silence: ‘Don’t want to dignify her (Pragya’s) remark

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ