ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಇದೀಗ ಸೋಲಿನ ದಂಡಯಾತ್ರೆಯಿಂದ ಹೊರ ಬಂದು ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಸತತ ಮೂರು ಪಂದ್ಯಗಳನ್ನ ಗೆದ್ದಿರುವ ಆರ್ಸಿಬಿ ಇದೀಗ ಪ್ಲೇ ಆಫ್ ಕನಸು ಕಾಣುತ್ತಿದೆ.
ಟೂರ್ನಿ ಆರಂಭದಿಂದಲೂ ಬರೀ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಪಂಜಾಬ್, ಕೋಲ್ಕತ್ತಾ ಮತ್ತು ಚೆನ್ನೈ ವಿರುದ್ಧ ಗೆಲ್ಲುವ ಮೂಲಕ ತನ್ನ ಸೋಲಿನ ದಂಡಯಾತ್ರೆಗೆ ಬ್ರೇಕ್ ಹಾಕಿತ್ತು. ಮೂರು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆಲ್ಲಲು ಕಾರಣವಾಗಿದ್ದು ಬೇರೆ ಯಾರು ಅಲ್ಲ ಬುಲೆಟ್ ವೇಗದಲ್ಲಿ ಚೆಂಡೆಸೆಯುವ ಡೇಲ್ ಸ್ಟೇನ್ .
ಸೌತ್ ಆಫ್ರಿಕಾದ ಈ ಸ್ಪೀಡ್ಸ್ಟರ್ ಆರ್ಸಿಬಿಗೆ ಎಂಟ್ರಿಕೊಟ್ಟಿದ್ದೆ ತಡ ಆರ್ಸಿಬಿಗೆ ಅದೃಷ್ಟ ಖುಲಾಯಿಸಿಬಿಡ್ತು. ಡೇಲ್ ಸ್ಟೇನ್ ಪಂಜಾಬ್, ಕೋಲ್ಕತ್ಥಾ ವಿರುದ್ಧ ಆಡಿ ತಂಡಕ್ಕೆ ಗೆಲುವು ತಂದುಕೊಟ್ರು.
ಆರ್ಸಿಬಿಗೆ ಶಾಕ್ ಆದ ಡೇಲ್ ಸ್ಟೇನ್ ಇಂಜುರಿ
ಹೀಗೆ ಎರಡು ಪಂದ್ಯಗಳನ್ನ ಗೆದ್ದು ಆರ್ಸಿಬಿ ಸಂತಸದಲ್ಲಿರುವಾಗಲೇ ವೇಗಿ ಡೇಲ್ ಸ್ಟೇನ್ ಮತ್ತೆ ಇಂಜುರಿಗೆ ಗುರಿಯಾದ್ರು. ಇದು ಆರ್ಸಿಬಿಗೆ ಬರಸಿಡಿಲನಂತೆ ಬಡಿಯಿತು. ಇದರ ಪರಿಣಾಮ ಡೇಲ್ ಸ್ಟೇನ್ ಟೂರ್ನಿಯಿಂದಲೇ ಹೊರ ನಡೆಯಬೇಕಾಯಿತು.
ಸ್ಟೇನ್ ಸ್ಥಾನಕ್ಕೆ ರಿಪ್ಲೇಸ್ ಮಾಡಲು ಆರ್ಸಿಬಿ ಪ್ಲಾನ್
ಇಂಜ್ಯೂರಿಯಿಂದಾಗಿ ಹೊರ ನಡೆದಿರುವ ವೇಗಿ ಡೇಲ್ ಸ್ಟೇನ್ ಸ್ಥಾನಕ್ಕೆ, ಫರ್ಫೆಕ್ಟ್ ರಿಪ್ಲೇಸ್ ಮಾಡಲು ಆರ್ಸಿಬಿ ಪ್ಲಾನ್ ಮಾಡಿದೆ. ಸ್ಟೇನ್ ಪ್ಲೇಸ್ಗೆ ಆರ್ಸಿಬಿ ಫ್ರಾಂಚೈಸಿ ಮೂರು ಬೌಲರ್ಸ್ಗಳ ಪೈಕಿ ಒಬ್ಬರನ್ನ ಆಯ್ಕೆ ಮಾಡಲು ಚಿಂತೆನೆ ನಡೆಸಿದೆ. ಹಾಗಾದ್ರೆ ಆ ಮೂರು ಬೌಲರ್ಗಳ್ಯಾರು ಅನ್ನೋದನ್ನ ನೋಡೋಣ ಬನ್ನಿ .
ಡೇನಿಯಲ್ ಕ್ರಿಸ್ಟಿಯನ್
ಕ್ರಿಸ್ಟಿಯನ್ 2013ರಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದರು.ಕಳೆದ ವರ್ಷ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಕಣಕ್ಕಿಳಿದಿದ್ರು. ಇದಕ್ಕೂ ಮುನ್ನ ಪುಣೆ ಸೂಪರ್ ಜೇಂಟ್ಸ್ ಪರ ಆಡಿದ್ದರು. ಡೇನಿಯಲ್ ಕ್ರಿಸ್ಟಿಯನ್ ಅಗತ್ಯವಿದಲ್ಲಿ ಬ್ಯಾಟಿಂಗ್ ಕೂಡ ಮಾಡಬಹುದಾಗಿರುವುದರಿಂದ ಆರ್ಸಿಬಿ ಈ ಆಲ್ರೌಂಡರ್ಗೆ ಮಣೆ ಹಾಕಬಹುದಾಗಿದೆ.
ಮಾರ್ನೆ ಮಾರ್ಕೆಲ್
ಮಾರ್ನೆ ಮಾರ್ಕೆಲ್ ಸೌಥ್ ಆಫ್ರಿಕಾದ ಅನುಭವಿ ಬೌಲರ್ . ಐಪಿಎಲ್ 9ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ಪರ ಬೌಲ್ ಮಾಡಿದ್ರು. ನಂತರ ಐಪಿಎಲ್ ಎಂಟ್ರಿ ಸಿಕ್ಕಿರಲಿಲ್ಲ. ಈ ವೇಗಿ ಅವಕಾಶಗಳಿಗಾಗಿ ಕಾದು ಕುಳಿತ್ತಿದ್ದೆ ಆಯ್ತು.
ಜೇಮ್ಸ್ ಪ್ಯಾಟಿನ್ಸನ್
ಪ್ಯಾಟಿನ್ಸನ್ 2011ರಲ್ಲಿ ಕೋಲ್ಕತ್ತಾ ನೈಟ್ರೈಡರ್ಸ ಪರ ಆಡಿದ್ದರು.ಸ್ಟೇನ್ರಂತೆ ಸ್ಪೀಡ್, ಸ್ವಿಂಗ್ ಹೊಂದಿರುವ ಪ್ಯಾಟಿನ್ಸನ್ಗೆ ಸ್ಟೇನ್ ಸ್ಥಾನ ತುಂಬಲಿದ್ದಾರೆ ಎನ್ನಲಾಗ್ತಿದೆ.
ಸ್ಟೇನ್ರಂತೆ ಸ್ಪೀಡ್, ಸ್ವಿಂಗ್ ಹೊಂದಿರುವ ಪ್ಯಾಟಿನ್ಸನ್ಗೆ ಸ್ಟೇನ್ ಸ್ಥಾನ ತುಂಬಲಿದ್ದಾರೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಕ್ರಿಸ್ಟಿಯನ್, ವೇಗಿ ಜೇಮ್ಸ್ ಪ್ಯಾಟಿನ್ಸನ್, ದಕ್ಷಿಣ ಆಫ್ರಿಕಾ ಮಾಜಿ ಬೌಲರ್ ಮಾರ್ನ್ ಮಾರ್ಕೆಲ್ ಈ ಮೂವರಲ್ಲಿ ಒಬ್ಬರು ಆರ್ಸಿಬಿ ಪರ ಕಣಕ್ಕಳಿಯುವ ಸಾಧ್ಯತೆ ಇದೆ.ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಈ ಮೂವರು ಆಟಗಾರರು ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ತಮ್ಮ ಟ್ಯಾಲೆಂಟ್ ಏನು ಅನ್ನೋದನ್ನ ಪ್ರೂವ್ ಮಾಡಬೇಕಿದೆ.