ಜೈಲುವಾಸದಲ್ಲಿ ಅನುಭವಿಸಿದ್ದ ಮಾನಸಿಕ, ದೈಹಿಕ ಹಿಂಸೆಯಿಂದ ಸಾಧ್ವಿ ಪ್ರಜ್ನಾಗೆ ಕ್ಯಾನ್ಸರ್ ಬಂದಿದೆ: ಬಾಬಾ ರಾಮ್ ದೇವ್

ನವದೆಹಲಿ: ಭೋಪಾಲ್​ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ನಾ ಸಿಂಗ್ ಠಾಕೂರ್ ಗೆ ಬೆಂಬಲ ಸೂಚಿಸಿರುವ ಯೋಗಗುರು ಬಾಬಾರಾಮ್ ದೇವ್, ಜೈಲುವಾಸದಿಂದಾಗಿ ಪ್ರಜ್ನಾ ಸಿಂಗ್ ಗೆ ಕ್ಯಾನ್ಸರ್ ಬಂದಿದೆ ಎಂದು ಹೇಳಿದ್ದಾರೆ.

2008ರ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್​ ಠಾಕೂರ್‌ ಅವರು 9 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಜೈಲಿನಲ್ಲಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಅವರು ದೈಹಿಕವಾಗಿ ಶಕ್ತಿಗುಂದಿದ್ದರಿಂದ ಅವರಿಗೆ ಕ್ಯಾನ್ಸರ್​ ರೋಗ ಬಂದಿದೆ. ಅವರು ರಾಷ್ಟ್ರೀಯವಾದಿ ಮಹಿಳೆ ಎಂದು ರಾಮ್​ ದೇವ್​ ಅಭಿಪ್ರಾಯ ಪಟ್ಟಿದ್ದಾರೆ.

Ramdev calls Pragya Thakur a nationalist, claims she got cancer from stress of torture in jail

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ