ನವದೆಹಲಿ: ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 20 ರೂ ಮುಖಬೆಲೆಯ ಹೊಸ ನೋಟನ್ನು ಹೊರತರಲಿದೆ. ಈ ನೂತನ ಮಾದರಿಯ ಹೊಸ ನೋಟಿನ ವಿನ್ಯಾಸವನ್ನು ಆರ್ ಬಿಐ ಬಿಡುಗಡೆಗೊಳಿಸಿದೆ.
ನೋಟ್ ಬ್ಯಾನ್ ಬಳಿಕ ಆರ್ ಬಿಐ 500, 2000 ರೂಪಾಯಿ ಮೌಲ್ಯದ ಹೊಸ ನೋಟುಗಳೊಂದಿಗೆ 10, 50, 200 ರೂಪಾಯಿಯ ಹೊಸನೋಟನ್ನು ಮುದ್ರಿಸಿತ್ತು. ಈಗ ಶೀಘ್ರದಲ್ಲೇ 20 ರೂಪಾಯಿ ನೋಟನ್ನೂ ಕೂಡ ಹೊಸ ಮಾದರಿಯಲ್ಲಿ ಮುದ್ರಿಸಿ ಹೊರತರುವುದಾಗಿ ಘೋಷಿಸಿದೆ.
ಹೊಸ ಮಾದರಿಯ 20 ರೂಪಾಯಿ ನೋಟು 63ಎಂಎಂ X129ಎಂಎಂ ಅಳತೆಯಲ್ಲಿದ್ದು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿದೆ. ದೇಶದ ಸಂಸ್ಕೃತಿಯನ್ನು ಬಿಂಬಿಸುವಂತೆ ಎಲ್ಲೋರಾ ಗುಹೆಗಳ ಚಿತ್ರವನ್ನು ನೋಟಿನ ಹಿಂಬದಿಯಲ್ಲಿ ಮುದ್ರಿಸಲಾಗಿದೆ.
ನೋಟಿನ ಮುಂಭಾಗದಲ್ಲಿ ಗಾಂಧೀಜಿ ಚಿತ್ರವಿದ್ದು, ಆರ್ಬಿಐ, ಭಾರತ್, ಇಂಡಿಯಾ ಮತ್ತು 20 ಎಂದು ಸಣ್ಣ ಅಕ್ಷರಗಳಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಬರೆಯಲಾಗಿದೆ. ಹಿಂಭಾಗದಲ್ಲಿ ಮುದ್ರಣವಾದ ವರ್ಷ, ಸ್ವಚ್ಛಭಾರತ ಲೋಗೋ ಮತ್ತು ಘೋಷಣೆಯನ್ನು ಮುದ್ರಿಸಲಾಗಿದೆ.
20 rs Notes: RBI to issue new Rs 20 note