ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ವಿರುದ್ಧ ಎಫ್ ಐ ಆರ್ ದಾಖಲು

ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ಅವರ ವಿರುದ್ಧ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಏ.25ರಂದು ದೆಹಲಿಯ ಜಂಗ್​ಪುರಾದಲ್ಲಿ ನಡೆಸಿದ ಚುನಾವಣಾ ರ‍್ಯಾಲಿಗೆ ಗಂಭೀರ್ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗ ಪೊಲೀಸರಿಗೆ ಸೂಚಿಸಿತ್ತು.

ಈಗಾಗಲೇ ಆಪ್​ ಗೌತಮ್​ ಗಂಭೀರ್​ ವಿರುದ್ಧ ದೂರು ದಾಖಲಿಸಿದೆ. ಗೌಂಭೀರ್​ ಎರಡು ಸ್ಥಳಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆಪ್​ ಅಭ್ಯರ್ಥಿ ಅತಿಶಿ ಹಜಾರಿ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದಾರೆ.

ಈಗ ದೆಹಲಿಯ ಪೊಲೀಸರು ಎಫ್​ಐಆರ್​ ದಾಖಲಿಸಿದ ಬಳಿಕ ಅತಿಶಿ ಟ್ವೀಟ್​ ಮಾಡಿದ್ದು, ಮೊದಲು ನಾಮಪತ್ರ ಸಲ್ಲಿಸುವುದರಲ್ಲಿ ಎಡವಿದಿರಿ, ನಂತರ ಎರಡು ಮತದಾನ ಗುರುತು ಪತ್ರ ಹೊಂದುವ ಮೂಲಕ ಕ್ರಿಮಿನಲ್​ ಅಪರಾಧ ಮಾಡಿದ್ದೀರಿ, ಈಗ ರ್ಯಾಲಿ ನಡೆಸಲು ಅನುಮತಿ ಪಡೆಯದೆ ಎಫ್​ಐಆರ್​ ದಾಖಲಾಗಿದೆ. ನಿಮಗೆ ನಿಯಮಗಳೇ ಗೊತ್ತಿಲ್ಲವೆಂದಮೇಲೆ ಆಟಕ್ಕೆ ಯಾಕೆ ಇಳಿಯುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ