ಕಲಬುರಗಿ,ಏ.25- ಮೂವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದು ಮತ್ತಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ನಗರದ ಹೊರವಲಯದ ಹಾಗರಗಾ ರಸ್ತೆ ಬಳಿ ನಡೆದಿದೆ.
ನಗರದ ಖಾಜಾ ಕಾಲೋನಿ ನಿವಾಸಿ ಫಯಾಜ್ ಶೇಖ್(25 ) ಕೊಲೆಯಾದ ದುರ್ದೈವಿ. ಇನ್ನಿಬ್ಬರಾದ ಇಮ್ರಾನ್ ಮತ್ತು ಯಾಕೂಬ್ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಪೀರ್ ಬಂಗಾಲ ದರ್ಗಾದಿಂದ ಈ ಮೂವರನ್ನು ಅಪಹರಿಸಲಾಗಿತ್ತು.
ಅಬು ಮೌಲಾನ ಬ್ರದರ್ಸ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಆದರೆ ಕೊಲೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.