ನಗರದಲ್ಲಿ ಮುಂದುವರೆದ ಸರಗಳ್ಳರ ಹಾವಳಿ

ಬೆಂಗಳೂರು, ಏ.25-ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ನಿನ್ನೆ ಸಂಜೆ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರ ಸರಗಳನ್ನು ಎಗರಿಸಿದ್ದಾರೆ.

ಚಾಮರಾಜಪೇಟೆ: ದೇನಾ ಬ್ಯಾಂಕ್ ಸಮೀಪದ 35ನೆ ಕ್ರಾಸ್, 5ನೆ ಬ್ಲಾಕ್‍ನಲ್ಲಿ ಶೋಭಾದೇವಿ ಎಂಬುವವರು ಸಂಜೆ 7 ಗಂಟೆ ಸಮಯದಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲ್ಲಿದ್ದ 70 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.

ಹನುಮಂತನಗರ: ಇಲ್ಲಿನ 3ನೆ ಕ್ರಾಸ್‍ನಲ್ಲಿ ಜ್ಯೋತಿ ಎಂಬುವವರು ಸಂಜೆ 7 ಗಂಟೆಯಲ್ಲಿ ನಡೆದುಹೋಗುತ್ತಿದ್ದಾಗ ಸರಗಳ್ಳ ಇವರ 68 ಗ್ರಾಂ ಸರ ಎಗರಿಸಿದ್ದಾನೆ.

ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ರಾಗಿಗುಡ್ಡದ ರಸ್ತೆ, 6ನೆ ಕ್ರಾಸ್‍ನಲ್ಲಿ ಸುಮಿತ್ರಾ ಎಂಬುವವರು ರಾತ್ರಿ 8.45ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರ ಪೈಕಿ ಹಿಂಬದಿ ಸವಾರ ಇವರ ಕೊರಳಲ್ಲಿದ್ದ 48 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾನೆ.

ಕೋರಮಂಗಲ: ಕೋರಮಂಗಲದ 3ನೆ ಕ್ರಾಸ್, ಮೊದಲನೆ ಮುಖ್ಯರಸ್ತೆಯಲ್ಲಿ ಲಕ್ಷ್ಮಮ್ಮ ಎಂಬುವವರು ಸಂಜೆ 7.30ರಲ್ಲಿ ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಸರಗಳ್ಳ 75 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾನೆ.

ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ