ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಈ ಬಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಮಾಡಿ ಅಣಕಿಸಿದ್ದಾರೆ.
ಮೊರಾದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಧು, ಪ್ರಧಾನಿ ಮೋದಿಯನ್ನು ಅನುಕರಿಸುವ ಮೂಲಕ ಅಣಕವಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಅವರು, ಸೊಳ್ಳೆಗೆ ಬಟ್ಟೆ ತೊಡೆಸುವುದು, ಆನೆಗೆ ತೊಟ್ಟಿಲು ಕಟ್ಟುವುದು ಹೇಗೆ ಅಸಾಧ್ಯವೋ, ಹಾಗೆಯೇ ಪ್ರಧಾನಿ ಮೋದಿ ಬಾಯಲ್ಲಿ ಸತ್ಯ ಬರುವುದು ಕೂಡ ಅಸಾಧ್ಯವಾದ ಮಾತು ಎಂದು ಕಿಡಿಕಾರಿದ್ದಾರೆ.
Navjot Singh Sidhu mimics PM Narendra Modi during public meeting in Moradabad