ದೆಹಲಿ 6 ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟ; ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಿಂದ ಸ್ಪರ್ಧೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಪೂರ್ವ ದೆಹಲಿಯಿಂದ ಅರ್ವಿಂದರ್​ ಸಿಂಗ್​ ಲವ್​ಲಿ ಸ್ಪರ್ಧಿಸಲಿದ್ದರೆ, ದೆಹಲಿ ಲೋಕಸಭಾ ಕ್ಷೇತ್ರದಿಂದ ಅಜಯ್​ ಮಾಕೆನ್​ ಕಣಕ್ಕಿಳಿಯಲಿದ್ದಾರೆ.

ಚಾಂದಿನಿ ಚೌಕ್​ ಕ್ಷೇತ್ರದಿಂದ ಜೆ.ಪಿ ಅಗರ್​ವಾಲ್​, ವಾಯವ್ಯ ದೆಹಲಿ (ಎಸ್​ಸಿ) ಕ್ಷೇತ್ರದಿಂದ ರಾಜೇಶ್​ ಲಿಲೋಥಿಯಾ ಮತ್ತು ಪಶ್ಚಿಮ ದೆಹಲಿಯಿಂದ ಮಹಾಬಲ್​ ಮಿಶ್ರಾ ಸ್ಪರ್ಧಿಸಲಿದ್ದಾರೆ.

General Election 2019: Sheila Dikshit To Contest From Delhi, Congress Names 6 Candidates

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ