ಹುಬ್ಬಳ್ಳಿ, ಏ.22-ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣ ಕುರಿತಂತೆ ಜಿಲ್ಲೆಗೆ ಆಗಮಿಸಿದ ಸಿಐಡಿ ತಂಡ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ನವೋದಯ ಕಾಲೇಜಿನ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಸಂಬಂಧ ಇಂದು ಸಿಐಡಿ ತಂಡದಿಂದ ಸಾವನ್ನಪ್ಪಿದ ಸ್ಥಳ ಪರಿಶೀಲನೆ ಮಾಡಲಾಯಿತು.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಸ್ಪಾದ ಸಾವಿನ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಿದ್ದರು.
ಐಪಿಎಸ್ ಅಧಿಕಾರಿ ಶರಣಪ್ಪ ನೇತೃತ್ವದ ಸಿಐಡಿ ತಂಡದಲ್ಲಿ ಒಬ್ಬ ಡಿವೈಎಸ್ಪಿ, ಇಬ್ಬರು ಸಿಪಿಐ ಹಾಗೂ ಎಂಟು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಸ್ಥಳ ಪರಿಶೀಲನೆ : ಡಿವೈಎಸ್ಪಿ ರವಿಶಂಕರ್ ನೇತೃತ್ವದ ಸಿಐಡಿ ತಂಡ ವಿದ್ಯಾರ್ಥಿಯ ಶವಪತ್ತೆಯಾದ ಬೋಳಮಾನ್ ದೊಡ್ಡಿ ರಸ್ತೆಯ ಹನುಮಂತ ದೇವಸ್ಥಾನದ ಬಳಿ ತೆರಳಿ ಸ್ಥಳ ಪರಿಶೀಲನೆ ನಡೆಸಿತು. ಸ್ಥಳ ಪರಿಶೀಲನೆ ಮುನ್ನ ಮಧು ತಂದೆ ತಾಯಿ, ಪೋಷಕರು ಮತ್ತು ಸಂಬಂಧಿಕರ ಜೊತೆಗೆ ಅರ್ಧ ಗಂಟೆಗೂ ಹೆಚ್ಚು ಮಾಹಿತಿ ಪಡೆದರು.
ತನಿಖೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಪೂರ್ಣ ಮಾಹಿತಿ ನೀಡುವುದಾಗಿ ಸಿಐಡಿ ತಂಡದ ಅಧಿಕಾರಿಗಳು ಹೇಳಿದ್ದಾರೆ.