ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿಗೆ ತನಿಖೆಗೆವಹಿಸಿದ ರಾಜ್ಯ ಸರ್ಕಾರ

ರಾಯಚೂರು: ನಗರದ  ಇಂಜಿನಿಯರಿಂಗ್​ ವಿದ್ಯಾರ್ಥಿ ಅನುಮಾಸ್ಪದ ಸಾವು ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ.  ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾವಿನ ಕುರಿತು  ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ  ಸಿಐಡಿಗೆ ವಹಿಸಿ ಆದೇಶ ನೀಡಿದೆ.

ವಿದ್ಯಾರ್ಥಿನಿ ಸಾವು ಪ್ರಕರಣ ದಿನದಿಂದ ದಿನಕ್ಕೆ  ತಿರುವು ಪಡೆಯುತ್ತಿರುವ  ಹಿನ್ನೆಲೆ ಸಿಐಡಿ ಎಸ್​ಪಿ ಶರಣಪ್ಪ, ಅನೂಪ್​ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಡಿಜಿಪಿ ನೀಲಮಣಿ ರಾಜು ಆದೇಶ ನೀಡಿದ್ದಾರೆ.

ವಿದ್ಯಾರ್ಥಿನಿ  ಸಾವು ಅಸಹಜ ಸಾವಾಗಿದೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯಲ್ಲಿರಲಿಲ್ಲ. ಆಕೆ ದೇಹದ ಮೇಲೆ ಸುಟ್ಟ ಕಲೆ ಕಳಿದ್ದು ಇದು ಕೊಲೆ ಎಂದು ವಿದ್ಯಾರ್ಥಿನಿ ಪೋಷಕರು ಆರೋಪಿಸಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸರು ಸುದರ್ಶನ್‍ಯಾದವ್ ಎಂಬ ಯುವಕನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ವಿದ್ಯಾರ್ಥಿನಿಗೆ ನ್ಯಾಯ ಸಿಗುವುದಿಲ್ಲ.

ಸ್ಥಳೀಯ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಇಲ್ಲಿನ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಇನ್ನು ಈ ಕುರಿತು ನಟ ದರ್ಶನ್​ ಸೇರಿದಂತೆ ಹಲವು ನಟ, ನಟಿಯರು ಸೇರಿದಂತೆ ಸಂಘಟನೆಗಳು ಒತ್ತಾಯಿಸಿದ್ದವು. ಇನ್ನು ಸಿಎಂ ಕುಮಾರಸ್ವಾಮಿ ಕೂಡ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು,ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ಸೂಚನೆ ನೀಡಿ ಆದೇಶಿಸಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ