ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರೂ ವನವಾಸಿ ಕಲ್ಯಾಣ(ರಿ)ಕರ್ನಾಟಕ ದ ಪ್ರಾರಂಭಕ್ಕೆ ಕಾರಣೀ ಕರ್ತರೂ ಆದ ಮಾ,ಶ್ರೀ ಪ್ರಕಾಶ ಕಾಮತ್ ಜಿ ಯವರು ಇಂದು ಬೆಳಗಾವಿಯಲ್ಲಿ ಮದ್ಯಾಹ್ನ 4:30 ಸುಮಾರಿಗೆ ಕೊನೆಯುಸಿರೆಳೆದರು.
ಶ್ರೀಕಾಮತರು 1949 ರ ಎಪ್ರಿಲ್ 10 ರಂದು ಶ್ರೀಕ್ಷೇತ್ರ ಶ್ರಿಂಗೇರಿಯಲ್ಲಿ ಜನಿಸಿದವರು. ನಂತರ ಸೂರತ್ಕಲ್ ನ ರೀಜನಲ್ ಇಂಜಿನೀಯರಿಂಗ್ ಕಾಲೇಜ್ ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಪದವಿಯಲ್ಲಿ ಚಿನ್ನದ ಪದಕ ಪಡೆಯುವುದರೊಂದಿಗೆ ಮುಗಿಸಿದರು.
ಶಿಕ್ಷಣದ ನಂತರ ತಮ್ಮ ಇಡೀ ಜೀವನವನ್ನು ಸಮಾಜಸೇವೆಗೋಸ್ಕರ ಮೀಸಲಿಟ್ಟರು. ವಿಶೇಶವಾಗಿ ವನವಾಸಿಗಳ ಸರ್ವಾಂಗೀಣ ವಿಕಾಸಕ್ಕಾಗಿ ಯೇ ಜೀವನ ಪೂರ್ತಿ ದುಡಿದರು. ವನವಾಸಿಗಳ ವಿಕಾಸಕ್ಕಾಗಿ ಕೇವಲ ಕರ್ನಾಟಕಅಷ್ಟೇ ಅಲ್ಲದೇ ದೇಶದ ಪೂರ್ವಾಂಚಲ, ಝಾರ್ಖಂಡ್,ಬಿಹಾರ್ ಸೇರಿದಂತೆ ಎಲ್ಲಾ ರಾಜ್ಯಗಳ ಲ್ಲೂ ಸಂಚಾರ, ವಾಸ್ತವ್ಯ ಮಾಡಿ ವನವಾಸಿಗಳ ಸಂಘಟನೆ ಮಾಡಿದ್ದಾರೆ. ಉತ್ತರ ಭಾರತ ದಲ್ಲಿಯೇ 10 ವರ್ಷ ಸೇವೆ ಸಲ್ಲಿಸಿದ್ದಾರೆ.
ವಿಶೇಶವೆಂದರೆ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಸಂಸ್ಥಾಪಕರಾದ ಸ್ವರ್ಗೀಯ ಶ್ರೀ ಬಾಳಾಸಾಹೇಬ ದೇಶಪಾಂಡೆ ಯವರ ಪುಣ್ಯ ತಿಥಿಯಂದೇ ಶ್ರೀ ಕಾಮತರು ಸ್ವರ್ಗಸ್ಥರಾಗಿದ್ದಾರ.
? ಶ್ರೀಪ್ರಕಾಶರ ಅಂತಿಮ ಸಂಸ್ಕಾರವು ಅವರ ಹುಟ್ಟೂರಾದ ಶ್ರಿಂಗೇರಿಯಲ್ಲಿ ನಾಳೆ(22 /4 /2019) ಬೆಳಿಗ್ಗೆ 9:00 ಕ್ಕೆ ನಡೆಯಲಿದೆ.
ಮಾಹಿತಿಗಾಗಿ ?9591096787_ಶ್ರೀ ಶ್ರೀನಿವಾಸ.
ಸುರತ್ಕಲ್ ನ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ. ಇ. ವ್ಯಾಸಂಗ ಮಾಡಿ ಚಿನ್ನದ ಪದಕ ಪಡೆದ ಶ್ರೀ ಪ್ರಕಾಶ್ ಕಾಮತ್ ಅವರು ತಮ್ಮ ಇಡಿಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ, ವನವಾಸಿಗಳ ಸೇವೆಯಲ್ಲಿ ನಿಯೋಗಿಸಿಕೊಂಡವರು. ಕರ್ನಾಟಕ ರಾಜ್ಯದಲ್ಲಿ ವನವಾಸಿ ಕಲ್ಯಾಣಕ್ಕಾಗಿ ಸಂಘಟನೆಯನ್ನು ಆರಂಭಿಸಿದ ಶ್ರೀ ಪ್ರಕಾಶ್ ಕಾಮತ್ ಅವರು ನಡೆಸಿದ ಜೀವನ ಅಪರಂಜಿಯಂತಹದು. ಸದಾ ಪ್ರೇರಣಾದಾಯಕ ಜೀವನ ನಡೆಸಿದ ಚೇತನಕ್ಕೆ ಶತ ಶತ ನಮನಗಳು.
ವಿ. ನಾಗರಾಜ್
ಕ್ಷೇತ್ರೀಯ ಸಂಘಚಾಲಕ
ದಕ್ಷಿಣ ಮಧ್ಯ ಕ್ಷೇತ್ರ
ಶ್ರೀ ಪ್ರಕಾಶ ಕಾಮತ್ ಅವರು ಕರ್ನಾಟಕದಲ್ಲಿ ವನವಾಸಿ ಕಲ್ಯಾಣದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವರು ಹಾಗೂ ವನವಾಸಿಗರ ಕಲ್ಯಾಣಕ್ಕಾಗಿ, ಅವರನ್ನು ಮುನ್ನೆಲೆಗೆ ತರಬೇಕೆಂದು ಅವಿರತವಾಗಿ ದುಡಿದವರು. ವನವಾಸಿಗರ ಮುನ್ನೆಲೆಗೆ ಬರುವುದು ಕಾರ್ಯಕರ್ತರ ಸತತ ಪ್ರಯತ್ನದಿಂದ ಹಾಗೂ ನಿಷ್ಠೆಯಿಂದಷ್ಟೇ ಎಂದು ಬಲವಾಗಿ ನಂಬಿದವರಾಗಿದ್ದರು.
ಶ್ರೀ ಶ್ರೀಪಾದ
ಸಂಘಟನಾ ಕಾರ್ಯದರ್ಶಿ,
ವನವಾಸಿ ಕಲ್ಯಾಣ
ದಕ್ಷಿಣ ಮಧ್ಯ ಕ್ಷೇತ್ರ,(ಕರ್ನಾಟಕ, ತೆಲಂಗಾಣ, ಆಂಧ್ರ)