ಅಭಿಮಾನಿಗಳಿಗೆ ಇಂದು ಸೂಪರ್ ಸಂಡೆಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣೆಸಾಟ ನಡೆಸಲಿದೆ. ಇದಕ್ಕೂ ಮುನ್ನ ಹೈದ್ರಾಬಾದ್ನ ಉಪ್ಪಾಳ್ ಅಂಗಳದಲ್ಲಿ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ – ಕೋಲ್ಕತ್ತಾ ನೈಟ್ ರೈಡರ್ಸ್ ಹೋರಾಟ ನಡೆಸಲಿವೆ.
ಸಿಎಸ್ಕೆ ವಿರುದ್ಧಸೇಡು ತೀರಿಸಿಕೊಳ್ಳಬೇಕು ಆರ್ಸಿಬಿ
ಆರ್ಸಿಬಿ ಚೆನ್ನೈ ವಿರುದ್ಧದ ಇಂದಿನ ಪಂದ್ಯ ಬರೀ ಕದವಲ್ಲ ಸೇಡಿನ ಕದನವಾಗಿದೆ. ಆರ್ಸಿಬಿ ತನ್ನ ಸೋಲಿನ ದಂಡ ಯಾತ್ರೆ ಆರಂಭಿಸಿದ್ದು ಚೆನ್ನೈ ವಿರುದ್ಧದ ಪಂದ್ಯದಿಂದ . ನಂತರ ಆಡಿದ ಆರು ಪಂದ್ಯಗಳನ್ನ ಆರ್ಸಿಬಿ ಕೈಚೆಲ್ಲಬೇಕಾಯಿತು. ಆರಂಭದಲ್ಲಿ ಮಂಕಾಗಿದ್ದ ವಿರಾಟ್ ಪಡೆ ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದೆ.ಮೊನ್ನೆ ಕೆಕೆಆರ್ ವಿರುದ್ಧದ ಹೈವೋಲ್ಟೇಜ್ ಕದನದಲ್ಲಿ ಗೆದ್ದು ತವರಿನಲ್ಲಾದ ಮುಖಭಂಗ ತೀರಿಸಿಕೊಂಡಿರುವ ಆರ್ಸಿಬಿ, ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಸೋಲುಣಿಸುವ ಲೆಕ್ಕಾಚಾರದಲ್ಲಿದೆ. ಅಲ್ದೇ ಉದ್ಘಾಟನಾ ಪಂದ್ಯದ ಲೆಕ್ಕಾ ಚುಕ್ತಾ ಮಾಡಲು ವಿರಾಟ್ ಪಡೆ ಯೋಜನೆ ರೂಪಿಸಿದೆ. ಹಿಂದಿನ ಪಂದ್ಯದ ಶತಕ ವೀರ ವಿರಾಟ್ ಕೊಹ್ಲಿ ಹಾಗೂ ಅಲ್ರೌಂಡರ್ ಮೊಹಿನ್ ಆಲಿ ಮತ್ತೆ ತಮ್ಮ ಪರಾಕ್ರಮ ಮೆರೆಯಲು ಸಜ್ಜಾಗಿದ್ದಾರೆ. ಅಲ್ದೇ ಸ್ಲಾಗ್ ಓವರ್ಗಳಲ್ಲಿ ಈಗಾಗಲೇ ತಮ್ಮ ಖದರ್ ತೋರಿಸಿರುವ ಮಾರ್ಕಸ್ ಸ್ಟೋಯ್ನಿಸ್ ಇಂದು ಕೂಡ ಅಬ್ಬರಿಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ ಉಡೀಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ..
ಕೆಕೆಆರ್ ವಿರುದ್ಧ ಮಿಂಚಿದ್ದ ವೇಗಿ ಡೇಲ್ ಸ್ಟೇನ್, ನವದೀಪ್ ಸೈನಿ ಇಂದಿನ ಪಂದ್ಯದಲ್ಲೂ ಅದೇ ಲಯ ಕಾಯ್ದುಕೊಳ್ಳಬೇಕಿದೆ. ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್ ಮತ್ತಷ್ಟು ಮೊನಚು ದಾಳಿ ಸಂಘಟಿಸಬೇಕಿದೆ. ಎಲ್ಲಾವಿಭಾಗಗಳಲ್ಲಿ ಮೇಲುಗೈ ಸಾಧಿಸಿದ್ರೆ ಉದ್ಘಾಟನ ಪಂದ್ಯದಲ್ಲಿ ಆದ ಮುಖಭಂಗಕ್ಕೆ ತವರಿನಲ್ಲಿ ಸೇಡುತೀರಿಸಿಕೊಳ್ಳಬಹುದು..
ಕೊನೆ ಸ್ಥಾನದ ತಂಡಕ್ಕೆ ನಂ.1 ತಂಡದ ಸವಾಲು..!
ಸದ್ಯ ಟೂರ್ನಿಯಲ್ಲಿ 9 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಸಿಎಸ್ಕೆ, ಇಂದು ಕೊನೆ ಸ್ಥಾನದಲ್ಲಿರುವ ಆರ್ಸಿಬಿ ವಿರುದ್ಧ ಮತ್ತೊಂದು ಜಯ ದಾಖಲಿಸಿ ಫ್ಲೇ ಆಫ್ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳುವ ಕನಸಿನಲ್ಲಿದೆ. ಧೋನಿ ಅನುಪಸ್ಥಿತಿಯ ಪಂದ್ಯದಲ್ಲಿ ಸನ್ ರೈಸಸ್ ವಿರುದ್ಧ ಹೀನಾಯ ಸೋಲು ಅನುಭವಿಸಿರುವ ಚೆನ್ನೈ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುವ ಕನಸಿನಲ್ಲಿದೆ. ಶೇನ್ ವಾಟ್ಸನ್ ಮಾಜಿ ತಂಡದ ವಿರುದ್ಧ ಉಗ್ರಪ್ರತಾಪ ತೋರಿಸೋಕೆ ರೆಡಿಯಾಗಿದ್ದಾರೆ. ಫಾಫ್ ಡುಪ್ಲಿಸಿಸ್ ಉತ್ತಮ ಪ್ರದರ್ಶನ ನಿಡುತ್ತಿದ್ದು, ಸುರೇಶ್ ರೈನಾ, ಅಂಬಾಟಿ ರಾಯುಡು ಮತ್ತಷ್ಟು ಶೈನ್ ಆಗಬೇಕಿದೆ.
ಇಂದಿನ ಪಂದ್ಯಕ್ಕೆ ಧೋನಿ ಲಭ್ಯ ಇರೋದ್ರಿಂದ ಸಿಎಸ್ಕೆಗೆ ಗೆಲುವಿನ ಆಸೆ ಚಿಗುರಿದೆ. ಕೇದಾರ್ ಜಾಧವ್ ತಂಡದಲ್ಲಿ ಇದ್ದು ಇಲ್ಲದಂತಾಗಿದೆ. ಸ್ಲಾಗ್ ಓವರ್ಗಳಲ್ಲಿ ಜಾಡೇಜಾ ತಂಡದ ಮೊತ್ತ ಹೆಚ್ಚಿಸುವ ತಾಕತ್ತು ಹೊಂದಿದ್ದಾರೆ.
ಪ್ಲೇ ಆಫ್ ಸನಿಹದಲ್ಲಿ ಧೋನಿ ಸೇನೆ
ಚೆನ್ನೈ ತಂಡದ ಗೆಲುವಿನಲ್ಲಿ ಬೌಲರ್ಗಳ ಪಾತ್ರಾ ಪ್ರಮುಖವಾಗಿದೆ. ತಂಡ ಸಂಕಷ್ಟದಲ್ಲಿದ್ದಾಗ ವಿಕೆಟ್ ಕೀಳೋದ್ರ ಜೊತೆಗೆ ರನ್ ದಾಹಕ್ಕೆ ಕಡಿವಾಣ ಹಾಕಬಲ್ಲ ಜಾದೂಗಾರರು ಚೆನ್ನಯ ತಂಡದಲ್ಲಿದ್ದಾರೆ. ವೇಗಿಗಳಾದ ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಸ್ಪಿನ್ನರ್ಸ್ ಜಡೇಜ, ತಾಹೀರ್, ಹರ್ಭಜನ್, ಸ್ಯಾಂಟ್ನರ್ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ.ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಕೋಲ್ಕತ್ತಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ರಸೆಲ್ ಅಬ್ಬರಕ್ಕೆ ಶರಣಾಗಿದ್ದ ಸನ್ ರೈಸರ್ಸ್ ತವರಿನ ಅಂಗಳದಲ್ಲಿ ತಿರುಗೇಟು ನೀಡೋಕ್ಕೆ ಸಜ್ಜಾಗಿದೆ..
ಮೊನ್ನೆ ಆರ್ಸಿಬಿ ವಿರುದ್ಧ ಸೋತಿರುವ ಕೆಕೆಆರ್ ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ..
ಸೇಡು ತೀರಿಸಿಕೊಳ್ಳಲು ಸನ್ ರೈಸರ್ಸ್ ಹೊಂಚು..!
ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೈದ್ರಾಬಾದ್ ತನ್ನ ತವರಿನ ಅಂಗಳದಲ್ಲಿ ಗೆದ್ದು ಬೀಗಿದೆ. ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಹೈದರಾಬಾದ್ ಮತ್ತೆ ಹೋಲಿಸಿದರೆ ಬೌಲರ್ಗಳು ಮಂಕಾದಂತಿದೆ. ಬ್ಯಾಟಿಂಗ್ನಲ್ಲಿ ಟೂರ್ನಿಯ ಗರಿಷ್ಠ ರನ್ ಸರದಾರ ಡೇವಿಡ್ ವಾರ್ನರ್, ಜಾನಿ ಬೇರ್ ಸ್ಟೋ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸಬೇಕಿದೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ದೀಪಕ್ ಹೂಡಾ, ಯೂಸೂಫ್ ಪಠಾಣ್ ಜವಾಬ್ದಾರಿಯುತ ಆಟ ಆಡಬೇಕಿದೆ. ರಶೀದ್ ಖಾನ್ ಅದ್ಭುತ ಬೌಲಿಂಗ್ ಪ್ರರ್ಶಿಸುತ್ತಿದ್ದು, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಭುವನಶ್ವರ್ ಕುಮಾರ್ ಸಿಎಸ್ಕೆ ವಿರುದ್ಧ ತೋರಿದ್ದ ಪ್ರದರ್ಶನವನ್ನೇ ಕಾಯ್ದುಕೊಳ್ಳಬೇಕಿದೆ.
ಸನ್ ರೈಸರ್ಸ್ ರಸ್ಸೆಲ್ ಮಸಲ್ ಪವರ್
ಇನ್ನು ಕೆಕೆಆರ್ ತಂಡವೂ ಸಹ ಬಲಿಷ್ಠವಾಗಿದ್ದು, ಘಟಾನುಘಟಿ ಆಟಗಾರರಿಂದ ಕೂಡಿದೆ.ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ10 ರನ್ಗಳ ಅಂತರದಿಂದ ಸೋಲು ಕಂಡಿದ್ದ ಕೆಕೆಆರ್ ಮತ್ತೆ ಗೆಲುವಿನ ಕನಸಿನಲ್ಲಿದೆ. ಕ್ರಿಸ್ ಲಿನ್, ನಾಯಕ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ ಇಂದು ಅಬ್ಬರಿಸಬೇಕಿದೆ. ಆರ್ಸಿಬಿ ವಿರುದ್ಧ ಅಬ್ಬರಿಸಿದ್ದ ನಿತೀಶ್ ರಾಣಾ, ರಸೆಲ್ ಸನ್ ರೈಸರ್ಸ್ಗೆ ಸವಾಲಾಗಿ ಕಾಡಬಲ್ಲರು. ಸುನೀಲ್ ನರೈನ್, ಕುಲ್ದೀಪ್ ಯಾದವ್, ಪ್ರಸಿದ್ಧ ಕೃಷ್ಣಾ, ಹೆನ್ರಿ ಗುರ್ನೆ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದು, ಇಂದಿನ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ… ಒಟ್ಟಿನಲ್ಲಿ ಉಭಯ ತಂಡಗಳ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲೂ ಸ್ಟ್ರಾಂಗ್ ಆಗಿದ್ದು, ಈ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಲಿದೆ.
ಒಟ್ಲಲ್ಲಿ ಸೂಪರ್ ಸಂಡೇಯ ನಾಲ್ಕು ತಂಡಗಳ ಕಾದಾಟ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಎಂಟರ್ಟೈನ್ಮೆಂಟ್ ನೀಡೋದ್ರಲ್ಲಿ ಅನುಮಾನವೇ ಇಲ್ಲ.