ಶ್ರೀಲಂಕಾದ ಕೊಲಂಬೋದಲ್ಲಿ ಮತ್ತೊಂದು ಬಾಂಬ್ ದಾಳಿ ನಡೆಸಿರುವ ಉಗ್ರರು ದೇವಾಲಯ ಹಾಗೂ ಚರ್ಚ್ ಮೇಲೆ ಅಟ್ಟ ಹಾಸ ಮೆರೆದಿದ್ದಾರೆ. ಉಗ್ರರ ಎರಡನೇ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಕೊಲಂಬೊದ ದೆಹಿವಾಲಾದಲ್ಲಿರುವ ಹೋಟೆಲ್ ಒಂದರಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಶ್ರೀಲಂಕಾದಲ್ಲಿ ಈ ವರೆಗೆ ಒಟ್ಟು 7 ಕಡೆ ಉಗ್ರರು ದಾಳಿ ನಡೆಸಿದ್ದಾರೆ.
ಬೆಳಿಗ್ಗೆ 8:45ರ ವೇಳೆ ಶ್ರೀಲಂಕಾದ ಮೂರು ಚರ್ಚ್ ಗಳು ಹಾಗೂ ಮೂರು ಹೋಟೆಲ್ ಸೇರಿ ಒಟ್ಟು ಆರು ಕಡೆಗಳಲ್ಲಿ ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 139ಕ್ಕೆ ಏರಿಕೆಯಾಗಿದ್ದು 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಮಧ್ಯಾಹ್ನ ಮತ್ತೊಂದು ಹೋಟೆಲ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.