ಬಳ್ಳಾರಿ, ಏ.20- ಲೋಕಸಭಾ ಚುನಾವಣೆ ಮುಗಿದ ಕೂಡಲೇ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ, ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಯಾರು ಬೀಳಿಸ ಬೇಕಿಲ್ಲ, ತಾನಾಗೆ ಬೀಳುತ್ತದೆ.ಈ ಸರ್ಕಾರ ಬಹಳದಿನ ಅಧಿಕಾರ ನಡೆಸುವುದಿಲ್ಲ ಎಂದರು.
ಮೇಲ್ನೋಟಕ್ಕಷ್ಟೇ ದೋಸ್ತಿ ಇದೇಯೆ ಹೊರತು ಎರಡು ಪಕ್ಷಗಳ ಒಳಗೆ ಗೊಂದಲವಿದೆ. ಅವರವರ ನಾಯಕರೆ ವಿರೋಧಾಬಾಸದ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ನಾನೇ ಸಿಎಂ ಅಂತಾರೆ..ಇಂತಹ ಹೇಳಿಕೆ ಕೊಡುವುದು ತರವಲ್ಲ. ಇದನ್ನೆಲ್ಲಾ ನೋಡಿದರೆ ಮೈತ್ರಿ ಪಕ್ಷದಲ್ಲಿ ಯಾವುದು ಸರಿಯಿಲ್ಲ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ರಾಜ್ಯದೆಲ್ಲೆಡೆ ಮೋದಿ ಹವಾ ಇದೆ. ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಗೆಲುವು ಸಾಧಿಸುತ್ತಾರೆ. ದೇಶದ ರಕ್ಷಣೆಗೆ ಸುಭದ್ರ ಆಡಳಿತಕ್ಕೆ ಮೋದಿಯವರನ್ನು ಬೆಂಬಲಿಸಬೇಕು ಎಂಬುದನ್ನು ಇದೇ ವೇಳೆ ಶ್ರೀರಾಮುಲು ಮನವಿ ಮಾಡಿದರು.