ಅಂಬಟಿ, ಪಂತ್ಗೆ ಸಮಾಧಾನಕರ ಬಹುಮಾನ ಕೊಟ್ಟ ಬಿಸಿಸಿಐ

ಇಡೀ ಕ್ರಿಕೆಟ್ ಜಗತ್ತೆ ಕಾದು ಕುಳಿತಿರುವ ವಿಶ್ವಕಪ್ಗೆ ಕೌಂಟ್ ಡೌನ್ ಶುರುವಾಗಿದೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವ ಯುದ್ದಕ್ಕೆ ಬಹುತೇಕ ಎಲ್ಲ ತಂಡಗಳು ತಮ್ಮ ತಂಡವನ್ನ ಪ್ರಕಟಿಸಿವೆ.

ಈ ಬಾರಿ ವಿಶ್ವ ಯುದ್ದವನ್ನ ಗೆಲ್ಲಲು ಎಲ್ಲ ಕ್ರಿಕೆಟ್ ಮಂಡಳಿಗಳು ಅಳೆದು ತೂಗಿ ತಂಡವನ್ನ ಪ್ರಕಟಿಸಿವೆ. ಪ್ರಶಸ್ತಿ ಗೆಲ್ಲುವ ರೇಸ್ನಲ್ಲಿ ಟೀಂ ಇಂಡಿಯಾ ಕೂಡ ಇದೆ. ಮೊನ್ನೆಯಷ್ಟೆ ವಿಶ್ವಕಪ್ಗೆ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಮಂಡಳಿ 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನ ಪ್ರಕಟಿಸಿತ್ತು. ಆಯ್ಕ ಸಮಿತಿ ಈ ಬಾರಿಯ ವಿಶ್ವ ಯುದ್ದಕ್ಕೆ ಬಲಿಷ್ಠ ತಂಡವನ್ನೆ ಕಳುಹಿಸಿಕೊಟ್ಟಿದೆ.


ಟೀಂ ಇಂಡಿಯಾ ಆಯ್ಕೆ ಕುರಿತು ಪರ ವಿರೋಧದ ಚರ್ಚೆ
ವಿಶ್ವಕಪ್ಗೆ ಟೀಂ ಇಂಡಿಯಾ ಆಯ್ಕೆ ಕುರಿತು ವಿಶ್ವ ಕ್ರಿಕೆಟ್ನಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮರಿ ಧೋನಿ ರಿಷಬ್ ಪಂತ್ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ಅಂಬಟಿ ರಾಯ್ಡು ಅವರನ್ನ ಕೈಬಿಟ್ಟಿರುವ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ರಿಷಭ್ ಮತ್ತು ಅಂಬಟಿಯನ್ನ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿ ಬಿಸಿಸಿಐ ಕಾಲೆಳೆದ ಅಂಬಟಿ ರಾಯ್ಡು
ಈ ಬಾರಿಯ ವಿಶ್ವಕಪ್ ಆಡಬೇಕಂದು ಬಹಳ ಕನಸು ಕಂಡಿದ್ದ ಹೈದ್ರಾಬಾದ್ ಬ್ಯಾಟ್ಸ್ಮನ್ ಅಂಬಟಿ ರಾಯ್ಡುಗೆ ಭಾರೀ ನಿರಾಸೆಯಾಗಿದೆ. ಈ ಬಗ್ಗೆ ತಮ್ಮ ಆಕ್ರೋಶವನ್ನ ಟ್ವೀಟರ್ನಲ್ಲಿ ವಿಶ್ವಕಪ್ ಕ್ರಿಕೆಟ್ ನೋಡಲು 3 ಡಿ ಕನ್ನಡಕಕ್ಕೆ ಈಗಷ್ಟೇ ಆರ್ಡರ್ ಮಾಡಿರುವೆ ವ್ಯಂಗ್ಯವಾಡಿದ್ದಾರೆ.

ರಾಯ್ಡು ಕೈಬಿಟ್ಟಿದನ್ನ ಸಮರ್ಥಿಸಿಕೊಂಡ ಎಂ.ಎಸ್.ಕೆ ಪ್ರಸಾದ್
ಅಂಬಟಿ ರಾಯ್ಡು ಅವರನ್ನ ಕೈಬಿಟ್ಟಿದಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಹೈದ್ರಾಬಾದ್ ಬ್ಯಾಟ್ಸ್ಮನ್ ಅವರನ್ನ ಕೈಬಿಟ್ಟಿದ್ಕಕೆ ಕಾರಣವನ್ನು ನೀಡಿದ್ದಾರೆ.

ಅಂಬಟಿ ಟ್ವೀಟ್ಗೆ ಉತ್ತರ ಕೊಟ್ಟ ಬಿಸಿಸಿಐ
ಈ ಬಾರಿಯ ವಿಶ್ವಕಪ್ನ್ನ 3ಜ ಕನ್ನಡಕವನ್ನ ಹಾಕಿ ನೋಡುತ್ತೇವೆ ಎಂದು ವ್ಯಂಗ್ಯವಾಡಿರುವ ಅಂಬಟಿ ರಾಯ್ಡು ಹೇಳಿಕೆಗೆ ಬಿಸಿಸಿಐ ಉತ್ತರ ಕೊಟ್ಟಿದೆ.

ನಾವು ರಾಯ್ಡು ಅವರ ಟ್ವೀಟನ್ನ ಓದಿದ್ದೇವೆ. ಇಂಥ ಸಮಯದಲ್ಲಿ ಅವರ ಭಾವನೆಗಳನ್ನ ಪರಿಗಣನೆಗೆ ತೆಗೆದುಕೊಳ್ಳೋಣ. ಅವರ ನೋವನ್ನ ಮರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಅಂಬಟಿ ರಾಯ್ಡು ಹೆಚ್ಚುವರಿ ಆಟಗಾರರಾಗಿರೋದ್ರಿಂದ ಯಾರಾದರೂ ಗಾಯಗೊಂಡರೇ ಆಡಲು ಅವಕಾಶ ಸಿಗುತ್ತದೆ.

ಸ್ಟ್ಯಾಂಡ್ ಬೈ ಆಟಗಾರರಾಗಿ ರಿಷಬ್, ಅಂಬಟಿ
ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಅಂಬಟಿ ರಾಯ್ಡು ಅವರನ್ನ ವಿಶ್ವಕಪ್ಗೆ ಹೆಚ್ಚುವರಿ ಆಟಗಾರರಾಗಿ ಬಿಸಿಸಿಐ ನೇಮಕ ಮಾಡಿದೆ. ಇವರೊಂದಿಗೆ ಯುವ ವೇಗಿ ನವದೀಪ್ಸೈನಿ ಅವರನ್ನ ಕೂಡ ಹೆಚ್ಚುವರಿ ಆಟಗಾರನಾಗಿ ನೇಮಕ ಮಾಡಲಾಗಿದೆ.

ಒಟ್ನಲ್ಲಿ ವಿಶ್ವಕಪ್ ಆಡಬೇಕೆಂದು ಕನಸು ಕಂಡಿದ್ದ ಅಂಬಟಿ ರಾಯ್ಡು ಮತ್ತು ರಿಷಬ್ ಪಂತ್ ನಿರಾಸೆ ಅನುಭವಿಸುತ್ತಿರುವಾಗಲೇ ಬಿಸಿಸಿಐ ಸಮಾಧಾನಕರ ಬಹುಮಾನ ಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ