ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಯುವ ಮುಖಂಡ ವಿಜಯಕುಮಾರ ಕೌಡ್ಯಾಳ ನೇತೃತ್ವದಲ್ಲಿ ಬುಧವಾರ ಪ್ರಚಾರ ನಡೆಯಿತು.
ಔರಾದ್ ತಾಲೂಕಿನ ಆಲೂರ (ಕೆ), ಬೇಲೂರ, ಗಡಿಕುಶನೂರ, ಕೌಠಾ(ಕೆ), ಕೌಠಾ (ಬಿ) ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡ ಐತಿಹಾಸಿಕ ಗ್ರಾಮ ಗೋರ್ಟಾ ವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಸದ ಭಗವಂತ ಖೂಬಾ ವಿಫಲರಾಗಿದ್ದಾರೆ ಎಂದು ದೂರಿದರು.
ಗೋರ್ಟಾ ಅನ್ನು ಆದರ್ಶ ಗ್ರಾಮ ತೆಗೆದುಕೊಂಡು ಯಾವುದೇ ಅಭಿವೃದ್ಧಿ ಮಾಡಿದೆ ನಿರ್ಲಕ್ಷ್ಯ ಮಾಡುವ ಮೂಲಕ ಗೋರ್ಟಾ ಜನರಿಗೆ ಖೂಬಾ ಅವಮಾನ ಮಾಡಿದ್ದಾರೆ. ಭಗವಂತ ಖೂಬಾ ಈ ಬಾರಿ ಹೀನಾಯ ವಾಗಿ ಸೋಲಲಿದ್ದು, ಭಾರಿ ಬೆಂಬಲ ವ್ಯಕ್ತವಾಗಿದ್ದು, ಈಶ್ವರ ಖಂಡ್ರೆ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕಿದೆ. ಈಶ್ವರ ಖಂಡ್ರೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕರಾದ ಗುಂಡಪ್ಪ ವಕೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಯನಗುಂದ ದೇಶಮುಖ, ಬಸವರಾಜ ದೇಶಮುಖರು, ಗೀತಾ ಚಿದ್ರಿ, ರಮೇಶ್ ಬರಾದಾರ ಇತರರು ಇದ್ದರು.