ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ತನ್ನ ಎಲ್ಲಾ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿದೆ. ಬುಧವಾರ ಮಧ್ಯರಾತ್ರಿ ಮುಂಬೈನಿಂದ ಅಮೃತಸರಕ್ಕೆ ಜೆಟ್ ಏರ್ ವೇಸ್ ನ ಕೊನೆಯ ವಿಮಾನ ಪ್ರಯಾಣ ಮಾಡುವ ಮೂಲಕ ಹಾರಾಟ ಕೊನೆಗೊಂಡಿದೆ ಎನ್ನಲಾಗಿದೆ.
ಹೆಚ್ಚಿನ ಹಣಕಾಸು ನೆರವು ನೀಡುವಂತೆ ಜೆಟ್ ಏರ್ವೇಸ್ನ ಮಧ್ಯಂತರ ಆಡಳಿತ ಮಂಡಳಿ ಮಾಡಿದ ಮನವಿಯನ್ನು ಎಸ್ಬಿಐ ನೇತೃತ್ವದ ಬ್ಯಾಂಕ್ಗಳು ತಿರಸ್ಕರಿಸಿದ ಕಾರಣ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ.
8 ಸಾವಿರ ಕೋಟಿಗೂ ಹೆಚ್ಚು ಸಾಲ ಹೊಂದಿರುವ ಜೆಟ್ ಏರ್ವೇಸ್ ಪುನಶ್ಚೇತನಕ್ಕೆ 1,500 ಕೋಟಿ ಧನಸಹಾಯ ನೀಡುವುದಾಗಿ ಬ್ಯಾಂಕುಗಳು ಹೇಳಿದ್ದವು. ನಂತರ 400 ಕೋಟಿ ನೀಡುವುದಾಗಿ ತಿಳಿಸಿದ್ದವು. ಬ್ಯಾಂಕ್ಗಳು ಭರವಸೆ ನೀಡಿದಂತೆ ನೆರವು ನೀಡದ ಕಾರಣ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಿದೆ ಎಂದು ಜೆಟ್ ಏರ್ವೇಸ್ ಮೂಲಗಳು ಹೇಳಿವೆ. ಜೆಟ್ ಏರ್ವೇಸ್ ಅಂತಾರಾಷ್ಟ್ರೀಯ ಸೇವೆಯನ್ನು ಈಗಾಗಲೇ ನಿಲ್ಲಿಸಿದ್ದು, ಬುಧವಾರದವರೆಗೆ ಐದು ವಿಮಾನಗಳು ಮಾತ್ರ ದೇಶದೊಳಗೆ ಸಂಚರಿಸುತ್ತಿದ್ದವು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ತಿಳಿಸಿದ್ದಾರೆ.
Jet Airways suspends all operations with immediate effect as banks