ಲಸಿತ್ ಮಲಿಂಗಾ ಅವರ ಮಾರಕ ದಾಳಿಯ ನೆರವಿನಿಂದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿ ವಿರುದ್ಧ ಐದು ವಿಕೆಟ್ಗಳ ಗೆಲುವು ಪಡೆದಿದೆ.
ವಾಂಖಡೆ ಅಂಗಳದಲ್ಲಿ ನಡೆದ ರೋಚಕ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು. ತಂಡದ ಪರ ಎಬಿಡಿ ವಿಲಿಯರ್ಸ್ 75,ಮೊಯಿನ್ ಅಲಿ 50 ರನ್ ಗಳಿಸಿದ್ರು. ಮುಂಬೈ ಪರ ಲಸಿತ್ಮಲಿಂಗಾ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು.
172 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್ಗೆ 70 ರನ್ಗಳ ಉತ್ತಮ ಆರಂಭ ನೀಡಿದ್ರು. ನಂತರ ಬಂದ ಸೂರ್ಯ ಕುಮಾರ್ ಯಾದವ್ 29, ಇಶನ್ ಕಿಶನ್ 21,ಕೃನಾಲ್ ಪಾಂಡ್ಯ 11, ಹಾರ್ದಿಕ್ ಪಾಂಡ್ಯ ಅಜೇಯ 37 ರನ್ ಬಾರಿಸಿ ಇನ್ನು ಒಂದು ಓವರ್ ಬಾಕಿ ಇರುವಂತೆ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ಆರ್ಸಿಬಿ ಟೂರ್ನಿಯಲ್ಲಿ ಏಳನೇ ಸೋಲು ಕಂಡು ಪ್ಲೇ ಆಫ್ ಕನಸು ಭಗ್ನಗೊಂಡಿದೆ.