ವಿಶ್ವಕಪ್ ಮಹಾ ಸಮರಕ್ಕೆ ಇಂದು ಟೀಂ ಇಂಡಿಯಾ ಪ್ರಕಟ: ಯಾರಿಗೆ ಸಿಗಲಿದೆ ಲಂಡನ್ ಟಿಕೆಟ್ ?

ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ನಲವತ್ತ ನಾಲ್ಕು ದಿನಗಳು ಬಾಕಿ ಇವೆ. ಈ ಬಾರಿ ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ ಮಹಾ ಹಬ್ಬಕ್ಕೆ ಕೌಂಟ್ ಶುರುವಾಗಿದೆ.

ಎಲ್ಲ ತಂಡಗಳು ಈ ಭಾರಿ ವಿಶ್ವಕಪ್ ಗೆಲ್ಲುವುದಕ್ಕಾಗಿ ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಈಗಾಗಲೇ ನ್ಯೂಜಿಲೆಂಡ್, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳನ್ನ ಪ್ರಕಟಿಸಲಾಗಿದೆ. ಇದೀಗ ವಿಶ್ವಕಪ್ ಮಹಾ ಸಮರಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು ಮಹಾ ಸಮರ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇತ್ತಿಚೆಗೆ ಸಾಲಿಡ್ ಪರ್ಫಾಮನ್ಸ್ ಕೊಟ್ಟಿದ್ದು ಮಹಾ ಸಮರದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದೆ.

ಎಂ.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ಸಭೆ ಸೇರಲಿದೆ ಆಯ್ಕೆ ಮಂಡಳಿ
ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ ಮಹಾಜಾತ್ರಗೆ ಇನ್ನು ಕೆಲವೇ ದಿನಗಳು ಬಾಕಿ ಇರೋದ್ರಿಂದ ಇಂದು ಮುಂಬೈನ ಬಿಸಿಸಿಐನ ಮುಖ್ಯ ಕಚೇರಿಯಲ್ಲಿ ಎಂ.ಎಸ್. ಪ್ರಸಾದ್ ನೇತೃತ್ವದ ಆಯ್ಕೆ ಮಂಡಳಿ ವಿಶ್ವಕಪ್ಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಟೀಂ ಇಂಡಿಯಾವನ್ನ ಆಯ್ಕೆ ಮಾಡಲಿದ್ದಾರೆ. ಕೊಹ್ಲಿ ಸೈನ್ಯದಲ್ಲಿ ಯಾವೆಲ್ಲ ಆಟಗಾರರು ತಂಡದಲ್ಲಿ ಸಸ್ಥಾನ ಪಡೆಯಲಿದ್ದಾರೆ ಅನ್ನೋದೇ ಕುತೂಹಲದ ವಿಷಯವಾಗಿದೆ. ಮೂಲಗಳ ಪ್ರಕಾರ ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸರಣಿಯಲ್ಲಿ ಆಡಿದ್ದ ಆಟಗಾರರನ್ನೆ ವಿಶ್ವಕಪ್ಗೆ ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ.

ವಿಶ್ವಕಪ್ಗೆ ಆಯ್ಕೆಯಾಗುವ 15 ಆಟಗಾರರು ಯಾರು ?
ಹೌದು ಈಗ ಸದ್ಯ ಎಲ್ಲರನ್ನು ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದ್ರೆ ಅದು ವಿಶ್ವಕಪ್ಗೆ ಆಯ್ಕೆ ಮಾಡುವ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್ ಸಿಗುತ್ತೆ ಅನ್ನೋದು ? ವಿಶ್ವಕಪ್ನಲ್ಲಿ ಸ್ಥಾನ ಪಡೆಯಲು ಟೀಂ ಇಂಡಿಯಾ ಆಟಗಾರರು ಇನ್ನಿಲ್ಲದ ಹೋರಾಟ ಮಾಡಿದ್ದಾರೆ. ಮಹಾ ಸಮರದಲ್ಲಿ ಆಡುವ 15 ಆಟಗಾರರು ಯಾರು ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಕುತೂಹಲ ಕೆರೆಳಿಸಿದೆ ನಂ.4 ಸ್ಲಾಟ್
ಟೀಂ ಇಂಡಿಯಾವನ್ನ ಪದೇ ಪದೇ ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ತಂಡದ ನಾಲ್ಕೆನೇ ಸ್ಲಾಟ್. ಕಳೆದ ಮೂರು ವರ್ಷಗಳಿಂದ ಈ ಸ್ಲಾಟ್ನಲ್ಲಿ ಬರೋಬ್ಬರಿ ಹನ್ನೊಂದು ಬ್ಯಾಟ್ಸ್ಮನ್ಗಳು ಆಡಿದ್ದಾರೆ. ಆದ್ರೆ ಯಾರೊಬ್ಬರು ಗಟ್ಟಿಯಾಗಿ ನಿಲ್ಲಲ್ಲಿಲ್ಲ. ಇತ್ತಿಚೆಗೆ ಹೈದ್ರಾಬಾದ್ ಬ್ಯಾಟ್ಸ ಮನ್ ಅಂಬಟಿ ರಾಯ್ಡು ಭರವಸೆ ಮೂಡಿಸಿದ್ರು. ಆದರೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಂಬಟಿ ರಾಯ್ಡು ಫ್ಲಾಪ್ ಆಗಿದ್ರು. ಹೀಗಾಗಿ ಆಯ್ಕೆ ಮಂಡಳಿ ಅಂಬಟಿ ರಾಯ್ಡುಗೆ ಮಣೆ ಹಾಕುತ್ತಾ ಅಥವಾ ಬೇರೆ ಆಟಗಾರರಿಗೆ ಮಣೆ ಹಾಕುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಬ್ಯಾಕ್ಅಪ್ ವಿಕೆಟ್ ಕೀಪರ್ ರೇಸ್ ನಲ್ಲಿ ಕಾರ್ತಿಕ್, ಪಂತ್
ತಂಡದಲ್ಲಿ ಬ್ಯಾಕ್ಅಪ್ ಕೀಪರ್ ಸ್ಲಾಟ್ಗಾಗಿ ಭಾರೀ ಫೈಪೋಟಿ ನಡೆಯುತ್ತಿದೆ. ಮಿಸ್ಟರ್ ಕೂಲ್ ಧೋನಿ ವಿಕೆಟ್ ಕೀಪರ್ರಾಗಿ ಕಾರ್ಯನಿರ್ವಹಿಸೋದು ಪಕ್ಕಾ ಆಗಿದೆ.

ಆದ್ರೆ ಬ್ಯಾಕ್ ವಿಕೆಟ್ ಕೀಪರ್ರಾಗಿ ಯಾರನ್ನ ಕಣಕ್ಕಿಳಿಸುತ್ತಾರೆ ಅನ್ನೋದೇ ಕೂತೂಹಲ ಮೂಡಿಸಿದೆ. ಆಯ್ಕೆ ಮಂಡಳಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ಗೆ ಮಣೆ ಹಾಕುತ್ತಾ ಅಥವಾ ಐಪಿಎಲ್ನಲ್ಲಿ ಅಬ್ಬರಿಸುತ್ತಿರುವ ಡೆಲ್ಲಿ ಬಾಯ್ ರಿಷಭ್ ಪಂತ್ಗೆ ಮಣೆ ಹಾಕುತ್ತಾ ಅನ್ನೊದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಆಲ್ರೌಂಡರ್ ಸ್ಲಾಟ್ಗಾಗಿ ಜಡ್ಡು , ಶಂಕರ್ ನಡುವೆ ಫೈಟ್
ಇನ್ನು ಆಲ್ರೌಂಡರ್ ಕೋಟಾದಡಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮಣೆ ಹಾಕೋದು ಗ್ಯಾರಂಟಿಯಾಗಿದೆ. ಬ್ಯಾಕ್ಅಪ್ ಆಲ್ರೌಂಡರ್ ಸ್ಲಾಟ್ಗೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ ಮತ್ತು ತಮಿಳುನಾಡು ಅಲ್ರೌಂಡರ್ ವಿಜಯ್ ಶಂಕರ್ ನಡುವೆ ಫೈಟ್ ನಡೆಯಲಿದೆ. ರವೀಂದ್ರ ಜಡೇಜಾ ಕೊಟ್ಟ ಅವಕಾಶಗಳನ್ನ ಸರಿಯಾಗಿ ಬಳಸಿಕೊಳ್ಳಲ್ಲಿಲ್ಲ. ಅದೇ ವಿಜಯ್ ಶಂಕರ್ ಹೇಳಿಕೊಳ್ಳವಂತಹ ಪರ್ಫಾಮನ್ಸ್ ಕೊಟ್ಟಿಲ್ಲದಿದ್ದರೂ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಂಡು ಇಂಪ್ರೆಸ್ ಮಾಡಿದ್ದಾರೆ.

ನಾಲ್ಕನೆ ಪೇಸರ್ರಾಗಿ ಕಣಕ್ಕಿಳಿಯುತ್ತಾರಾ ಖಲೀಲ್ ಅಹ್ಮದ್
ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ, ಬೆಂಗಾಲಿ ಬೌಲರ್ ಮೊಹ್ಮದ್ ಶಮಿ, ಸ್ವಿಂಗ್ ಕಿಂಗ್ ಭುವನಶ್ವರ್ ಕುಮಾರ್ ಆಡೋದು ಕನ್ಫಾರ್ಮ್ ಆಗಿದೆ.  ಖಲೀಲ್ ಅಹ್ಮದ್ಗೆ ಚಾನ್ಸ್ ನೀಡುವ ಸಾಧ್ಯತೆ ತುಂಬ ಇದೆ. ಖಲೀಲ್ ಏಷ್ಯಾಕಪ್ ಮತ್ತು ವೆಸ್ಟ್ ಇಂಡೀಸ್ ಸರಣಿಯಲ್ಲಿ ಮಿಂಚದ್ರು.

ಒಟ್ನಲ್ಲಿ ವಿಶ್ವಕಪ್ ಮಹಾ ಸಮರಕ್ಕೆ ಇಂದು ಆಯ್ಕೆ ಮಂಡಳಿ ಯಾವ ರಾಜಕೀಯವನ್ನು ಮಾಡದೇ ಟ್ರೋಫಿ ಗೆಲ್ಲುವ ತಂಡವನ್ನ ಪ್ರಕಟಿಸಲಿ ಅನ್ನೋದೇ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ