ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ವಿಶ್ವ ಕ್ರಿಕೆಟ್ನಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಮಾಡಿದವರು. ತಮ್ಮ ಶಾಂತ ಸ್ವಾಭವದಿಂದ ಪಂದ್ಯವನ್ನ ಗೆಲ್ಲಿಸಿಕೊಟ್ಟ ವಿಶ್ವ ಕ್ರಿಕೆಟನ್ನ ನಿಬ್ಬೆರೆಗಾಗುವಂತೆ ಮಾಡಿದವರು. ಧೋನಿಯ ಈ ಶಾಂತ ಸ್ವಾಭವ ಅದೆಷ್ಟೊ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದೆ. ಆದರೆ ಮೊನ್ನೆ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಲೈವಾ ಧೋನಿ ಕೋಪಗೊಂಡು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದು ಎಲ್ಲರಿಗೂ ಅಚ್ಚರಿಯಾಗಿದೆ.
ಸವಾಯಿಮಾನ್ ಸಿಂಗ್ ಅಂಗಳದಲ್ಲಿ ಧೋನಿ ರೌದ್ರಾವತಾರ
ಮೊನ್ನೆ ಸವಾಯಿಮಾನ್ ಸಿಂಗ್ ಅಂಗಳದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈಗೆ ಅಂತಿಮ ಓವರ್ ನಲ್ಲಿ ಗೆಲ್ಲಲು 18 ರನ್ ಗಳ ಅಗತ್ಯವಿತ್ತು. ಆ ವೇಳೆ ಜಡ್ಡು ಮೊದಲ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ರು. ನಂತರ ಮೂರನೇ ಎಸೆತದಲ್ಲಿ ಧೋನಿ ಕ್ಲೀನ್ ಬೋಲ್ಡ್ ಆದ್ರು. ನಾಲ್ಕನೇ ಎಸೆತದಲ್ಲಿ ರಾಜಸ್ಥಾನ ಪರ ಸ್ಟೋಕ್ಸ್ ಎಸೆದಿದ್ದ ಬಾಲ್ ಬ್ಯಾಟ್ ಗೆ ತಾಗದೆ ಹಿಂದೆ ಹೋಗಿತ್ತು. ಆದರೆ ಆ ಭಾಗದಲ್ಲಿ ಯಾವ ಫೀಲ್ಡರ್ ಇಲ್ಲದ ಕಾರಣ ಚೆನ್ನೈನ ಸ್ಯಾಂಟನರ್ ಹಾಗೂ ಜಡೇಜಾ ಸೇರಿ ಎರಡು ರನ್ ಗಳಿಸಿದ್ರು. ಆಗ ಅಂಪೇರ್ ಉಲ್ಲಾಸ್ ಗಂದೆ “ನೋಬಾಲ್” ಕೊಟ್ರು. ಆದರೆ ಮತ್ತೊಬ್ಬ ಅಂಪೇರ್ ಆಕ್ಸನ್ ಪೋರ್ಡ್ “ನೋಬಾಲ್” ನೀಡಲು ಒಪ್ಪಲಿಲ್ಲ. ಇದೇ ವೇಳೆ ಜಡೇಜಾ ನೋಬಾಲ್ ನಿಡುವಂತೆ ಅಂಪೇರ್ ಗೆ ಮನವಿ ಮಾಡಿದ್ರೂ ಅಂಪೇರ್ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಆಗ ಧೋನಿ ಮೈದಾನಕ್ಕೆ ಆಗಮಿಸಿ ಅಂಪೇರ್ ಜತೆ ವಾಗ್ವಾದಕ್ಕಿಳಿದ್ರು. ಆದರೂ ಅಂಪೇರ್ ಮಾತ್ರ “ನೋಬಾಲ್” ನೀಡಲು ಒಪ್ಪಲೇ ಇಲ್ಲ.ಈ ಘಟನೆಯನ್ನ ನೋಡಿದ ಧೋನಿ ಪೆವಿಲಿಯನ್ನಿಂದ ಆನ್ಫೀಲ್ಡ್ ಬಂದು ಅಂಪೈಯರ್ ಜೊತೆ ವಾಗ್ವಾದ ನಡೆಸಿದ್ರು. ಧೋನಿಯ ಈ ರೌದ್ರವಾತಾರಕ್ಕೆ ಬಿಸಿಸಿಐ ಧೋನಿಗೆ ಶೇಕಡ 50ರಷ್ಟು ದಂಡ ವಿಧಿಸಿದೆ. ಈ ಬಗ್ಗೆ ವಿಶ್ವಕ್ರಿಕೆಟ್ನಲ್ಲಿ ಪರ- ವಿರೋಧದ ಚೆರ್ಚೆಗಳು ನಡೆಯುತ್ತಿವೆ.
ಚೆನ್ನೈ ತಲೈವಾ ಧೋನಿ ಆನ್ಫೀಲ್ಡನಲ್ಲಿ ತಮ್ಮ ತಾಳ್ಮೆಯನ್ನ ಕಳೆದುಕೊಂಡಿದ್ದು ಇದೇ ಮೊದಲಲ್ಲ ಹಲವಾರು ಬಾರಿ ರೌದ್ರವತಾರ ತಾಳಿದ್ದಾರೆ.
ಅಂಪೈರ್ ಬಿಲ್ಲಿ ಬೌಡೆನ್ ವಿರುದ್ಧ ಜಗಳ ಮಾಡಿಕೊಂಡಿದ್ದ ಧೋನಿ
ಅದು ಏಳು ವರ್ಷಗಳ ಹಿಂದೆ ನಡೆದ ಘಟನೆ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ. ಪಾರ್ಟ್ ಟೈಮ್ ಬೌಲರ್ ಸುರೇಶ್ ರೈನಾ ಎಸೆತದಲ್ಲಿ ಮೈಕಲ್ ಹಸ್ಸಿ ಅವರನ್ನ ಧೋನಿ ಸ್ಟಂಪ್ ಮಾಡಿದ್ರು. ಆನ್ಫೀಲ್ಡ್ ಅಂಪೈರ್ಗಳು Third Umpire ಮೊರೆ ಹೋಗಿದ್ರು. Third Umpire ಕೂಡ ಇದನ್ನ ಔಟೆಂದು ತೀರ್ಪು ಕೊಟ್ರು. ಆಸಿಸ್ ಬ್ಯಾಟ್ಸ್ಮನ್ ಮೈಕಲ್ ಹಸ್ಸಿ ಪೆವಲಿಯನ್ತ್ತ ಹೆಜ್ಜೆ ಹಾಕಿದ್ರು. ಆದರೆ ಕೆಲವೇ ಸೆಕೆಂಡುಗಳಲ್ಲಿ ಅಂಪೈರ್ ಬಿಲ್ಲಿ ಬೌಡೆನ್ ಮೈಕಲ್ ಹಸ್ಸಿ ಅವರನ್ನ ತಡೆದು ವಾಪಸ್ ಬ್ಯಾಟಿಂಗ್ ಮಾಡಲು ಕರೆದ್ರು. ಅಲ್ಲಿಯೇ ಇದ್ದ ಟೀಂ ಇಂಡಿಯಾ ಆಟಗಾರರು ಒಮ್ಮೆ ಶಾಕ್ಗೆ ಒಳಗಾದ್ರು. ಧೋನಿ ಪಿತ್ತ ನೆತ್ತಿಗೇರಿತು. ಕೂಡಲೇ ಅಂಪೈಯರ್ ಬಿಲ್ಲಿ ಬೌಡೆನ್ ಜೊತೆ ವಾಗ್ವಾದಕ್ಕಿಳಿದ್ರು.
ಮುಸ್ತಾಫೀಜುರ್ಗೆ ಡಿಚ್ಚಿ ಹೊಡೆದ ಮಾಹಿ
ಅದು ಮೂರು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ ವಿರುದ್ಧ ಏಷ್ಯಾಕಪ್ನಲ್ಲಿ ನಡೆದ ಘಟನೆ. ಬಾಂಗ್ಲಾ ವೇಗಿ ಮುಸ್ತಾಫೀಜುರ್ ಎಸೆತದಲ್ಲಿ ಧೋನಿ ಕದಯಲು ಹೋಗುವಾಗ ಎದುರಿಗೆ ಬಂದ ಮುಸ್ತಾಫೀಜುರ್ಗೆ ಧೋನಿ ಡಿಚ್ಚಿ ಹೋಡೀತ್ತಾರೆ. ಧೋನಿ ಸರಿಯಾದ ದಾರಿಯಲ್ಲೆ ಓಡುತ್ತಿದ್ರು. ಆದರೆ ಮುಸ್ತಾಫೀಜುರ್ ಧೋನಿ ದಾರಿಗೆ ಅಡ್ಡಿ ಬಂದು ನಿಂತರು. ಇದರಿಂದ ಧೋನಿ ಗರಂ ಆದ್ರು. ಧೋನಿಗೆ ದಂಡವನ್ನ ವಿಧಿಸಿದ್ರು.
ಮನೀಶ್ ಪಾಂಡೆ ಮೇಲೆ ರಾಂಚಿ ಱಂಬೊ ಗರಂ
ಕಳೆದ ವರ್ಷ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಧೋನಿ ಕನ್ನಡಿಗ ಮನೀಶ್ ಪಾಂಡೆ ಮೇಲೆ ಗರಂ ಆಗಿದ್ರು. ಸೆಂಚುರಯನ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಸ್ಟ್ರೈಕ್ನಲ್ಲಿದ್ದ ಮನೀಶ್ ಪಾಂಡೆ ಒಂದು ರನ್ ತಗೆದ್ರು. ಮತ್ತೊಂದು ರನ್ ತೆಗೆಯುವ ಅವಕಾಶವಿತ್ತು. ಆದರೆ ಮನೀಶ್ ಪಾಂಡೆ ಬೇರೆ ಎಲ್ಲಿಯೋ ನೋಡ್ತಿದ್ರು. ಇದರಿಂದ ಕೆರಳಿದ ಧೋನಿ ಮನೀಶ್ ಪಾಂಡೆಯನ್ನ ತರಾಟೆಗೆ ತೆಗೆದುಕೊಂಡ್ರು.
ಕುಲ್ದೀಪ್ಗೆ ವಾರ್ನಿಂಗ್ ಕೊಟ್ಟಿದ್ದ ಚೆನ್ನೈ ತಲೈವ
ಕಳೆದ ವರ್ಷ ನಡೆದ ಏಷ್ಯಾಕಪ್ನಲ್ಲಿ ಚೆನ್ನೈ ತಲೈವಾ ಧೋನಿ ತಂಡದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ಕೋಪಗೊಂಡಿದ್ರು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ ಕುಲ್ದೀಪ್ಗೆ ವಾರ್ನಿಂಗ್ ಕೊಟ್ಟಿದ್ರು. ಕುಲ್ದೀಪ್ ಬೌಲಿಂಗ್ ಹಾಕುವಾಗ ಫೀಲ್ಡಂಗ್ ಚೇಂಜ್ ಮಾಡುವಂತೆ ಬಳಿ ವಾದ ಮಾಡಿದ್ರು. ಆಗ ಕೆರೆಳಿದ ಧೋನಿ , ಬೌಲಿಂಗ್ ಮಾಡ್ತೀಯಾ ಇಲ್ಲ ನಿನ್ನನ್ನ ಚೇಂಜ್ ಮಾಡಬೇಕಾ ಎಂದು ವಾರ್ನಿಂಗ್ ಕೊಟ್ಟಿದ್ರು.
ಓಟ್ನಲ್ಲಿ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ ಕೆರೆಳಿದ್ರೆ ಸಿಡಿಗುಂಡು ಅನ್ನೊದನ್ನ ಮತ್ತೋಮ್ಮೆ ಪ್ರೂವ್ ಮಾಡಿದ್ದಾರೆ.