ಮತದಾನ ಹೆಚ್ಚಿಸಲು ಬೀದಿನಾಟಕ, ರಂಗೋಲಿ ಹಾಗೂ ಗಾಳಿಪಟ ಸ್ಪರ್ಧೆ

ಬೆಂಗಳೂರು, ಏ.12- ಈಗ ಚುನಾವಣೆಯ ಸಮಯ. ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಬೀದಿನಾಟಕ, ರಂಗೋಲಿ ಹಾಗೂ ಗಾಳಿಪಟ, ಚಿತ್ರಕಲೆ ಸ್ಪರ್ಧೆ ಸೇರಿದಂತೆ ಚುನಾವಣಾ ಆಯೋಗ , ಸ್ವೀಪ್ ಸಮಿತಿ ಗಮನ ಸೆಳೆಯುತ್ತ ಬಂದಿದೆ.

ಕೆಲವು ಕುಂಚ ಕಲಾವಿದರು ಕೂಡ ತಮ್ಮದೇ ಆದ ಕಲ್ಪನೆಯಿಂದ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಈಗಾಗಲೇ ಕೆಲವು ಹೊಟೇಲ್‍ಗಳು, ಸವಿತಾ ಸಮಾಜದವರು ಮತದಾನ ಮಾಡಿ ಬಂದು ಆ ಗುರುತನ್ನು ತೋರಿಸಿದರೆ ಉಚಿತ ಊಟ, ಕ್ಷೌರ ಮಾಡುವುದಾಗಿ ಹೇಳುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ.

ಅದೇ ರೀತಿ ಬಾಟಲಿ ಕಲಾವಿದನೆಂದೇ ಹೆಸರಾಗಿರುವ ಬಸವರಾಜ್ ಅವರು ತಮ್ಮ ಕೈಚಳಕದಿಂದ ಬಾಟಲ್‍ನಲ್ಲಿ ಇವಿಎಂ ಯಂತ್ರದ ಚಿತ್ರವನ್ನು ಬಿಡಿಸಿ ಬಾಟಲ್‍ನಲ್ಲಿ ಅದನ್ನು ಅಡಗಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿಂದು ತಮ್ಮ ಬಾಟಲಿನ ಕಲೆಯನ್ನು ಪ್ರದರ್ಶಿಸಿದ ಅವರು, ಒಂದು ಪ್ರಬುದ್ಧ ಸಮಾಜಕ್ಕೆ ನಿಮ್ಮ ಒಂದೊಂದು ಮತವೂ ಅಮೂಲ್ಯವೆಂದು ಸಾರುವ ಸಲುವಾಗಿ ಈ ರೀತಿಯ ಕಲ್ಪನೆಯನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ