ಬೀದರ್: ಸುಳ್ಳು ಹೇಳುವುದು, ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವುದೇ ಬಿಜೆಪಿಯರವ ಕೆಲಸವಾಗಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಳೆದ ಐದು ವರ್ಷಗಳಲ್ಲಿ ಏನೇನು ಕೆಲಸ ಮಾಡಿದ್ದಾರೆ ಎಂದು ಮತದಾರರೇ ಪ್ರಶ್ನಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.
ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಾಲೆಬಿರನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅವಕಾಶ ಕೊಟ್ಟರು ಕೆಲಸ ಮಾಡದ ಖೂಬಾಗೆ ಮತ ಕೊಡುವುದರಲ್ಲಿ ಅರ್ಥವಿಲ್ಲ. ಈ ಬಾರಿಗೆ ಕಾಂಗ್ರೆಸ್ಗೆ ಬೆಂಬಲಿಸುವ ಮೂಲಕ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕು ಎಂದರು.
ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1000 ಗ್ರಾಮಗಳಿವೆ. ಈ ಪೈಕಿ ಆದರ್ಶ ಯೋಜನೆಯಡಿ ತೆಗೆದುಕೊಂಡು ಗೋರ್ಟಾ ಗ್ರಾಮವನ್ನು ಸಹ ಅವರಿಗೆ ಅಭಿವೃದ್ಧಿಪಡಿಸಲು ಭಗವಂತ ಖೂಬಾ ಅವರಿಗೆ ಸಾಧ್ಯವಾಗಿಲ್ಲ. ಇಂಥ ನಿಷ್ಕ್ರೀಯ ವ್ಯಕ್ತಿಗೆ ಮತ್ತೊಂದು ಬಾರಿ ಯಾಕೆ ಆಯ್ಕೆ ಮಾಡಬೇಕು ಎಂದು ಖಂಡ್ರೆ ಪ್ರಶ್ನಿಸಿದರು.
ಬೀದರ್ ಜಿಲ್ಲೆಯಲ್ಲಿ ಬಹುತೇಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಖಂಡ್ರೆ ಪರಿವಾರ ಶ್ರಮಿಸಿದೆ. ನೀರಾವರಿ ಯೋಜನೆ, ಸಕ್ಕರೆ ಕಾರಖಾನೆ, ಶಾಲಾ ಕಾಲೇಜು ಮುಂತಾದವುಗಳನ್ನು ಸ್ಥಾಪಿಸಿದೆ. ಮಾದರಿ ಕ್ಷೇತ್ರಕ್ಕಾಗಿ, ಸರ್ವಾಂಗೀಣ ವಿಕಾಸಕ್ಕೆ ಕಾಂಗ್ರೆಸ್ಗೆ ಮತ ನೀಡಿಬೇಕು ಎಂದು ಅವರು ಮನವಿ ಮಾಡಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನರೇಂದ್ರ ಮೋದಿ 2014 ರ ಚುನಾವಣೆ ವೇಳೆ ಭರವಸೆ ನೀಡಿದ್ದರು. ವಾಸ್ತವಿಕವಾಗಿ ಉದ್ಯೋU Àಸೃಷ್ಟಿಯಾಗಿವೆಯೇ, ಯುವಕರಿಗೆ ನೌಕರಿ ಸಿಕ್ಕಿದೆಯೇ ಎಂದು ಖಂಡ್ರೆ ಪ್ರಶ್ನಿಸಿದರು. ಮೋದಿ ಯುವಕರ ವಿರೋಧಿ ಆಗಿದ್ದರಿಂದ ಅವರ ಪಕ್ಷದ ಅಭ್ಯರ್ಥಿಗೆ ಯುವಕರ ಮತ ಕೇಳುವ ನೈತಿಕತೆ ಇಲ್ಲ ಎಂದು ಹೇಳಿದರು.