ಚುರುಕಿನಿಂದ ಪ್ರಚಾರಕ್ಕೆ ಇಳಿದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ

ಬೆಂಗಳೂರು,ಏ.11- ದೇಶದ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಚುರುಕಿನಿಂದ ಆರಂಭವಾಗಿದ್ದರೆ ಇತ್ತ ಬೆಂಗಳೂರಿನಲ್ಲೂ ಕಣದಲ್ಲಿರುವ ಹುರಿಯಾಳುಗಳು ಚುರುಕಿನಿಂದಲೇ ಪ್ರಚಾರಕ್ಕೆ ಇಳಿದಿದ್ದರು.

ನಾಗರೀಕರಿಂದ ಬಿಜೆಪಿಗೆ ವ್ಯಕ್ತವಾಗುತ್ತಿರುವ ಸ್ವಯಂಪ್ರೇರಿತ ಬೆಂಬಲದ ನಡುವೆ ಬೆಂಗಳೂರು ದಕ್ಷಿಣ ಲೋಕಾಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಅತ್ಯುತ್ಸಾಹದಿಂದಲೇ ಫೀಲ್ಡ್‍ಗೆ ಇಳಿದಿದ್ದರು.

ದಕ್ಷಿಣ ಕ್ಷೇತ್ರದ ನಾನಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಗಿನಿಂದಲೇ ಪಾರ್ಕ್ ಗಳು, ಅಪಾರ್ಟ್ ಮೆಂಟ್ ಗಳು, ಫ್ಯಾಕ್ಟರಿಗಳು, ದೇವಸ್ಥಾನಗಳು, ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಪಾದಯಾತ್ರೆ, ಮನೆ ಮನೆ ಬೇಟಿ, ಬೈಕ್ ರ್ಯಾಲಿ, ರೋಡ್ ಶೋಗಳ ಮೂಲಕ ಮತದಾರರನ್ನು ಆಕರ್ಷಿಸಿದರು.

ತೇಜಸ್ವಿ ಸೂರ್ಯ ಬೆಳಗ್ಗೆ ಆರು ಗಂಟೆಗೆ ಜಯನಗರದ ಲಕ್ಷ್ಮಣ್ ರಾವ್ ಪಾರ್ಕ್ ಗೆ ಭೇಟಿ ನೀಡಿ ನಡಿಗೆ ಮತ್ತು ದೈಹಿಕ ಅಭ್ಯಾಸ ಮಾಡುತ್ತಿದ್ದವರಲ್ಲಿ ಮತಯಾಚನೆ ಮಾಡಿದರು.

ತದನಂತರ, ಜಯನಗರ ವಿಧಾನ ಸಭಾ ಕ್ಷೇತ್ರದ ಹಲವು ವಾರ್ಡ್‍ಗಳಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲೂ ಪಾಲ್ಗೊಂಡಿದ್ದರು.

ಈ ವೇಳೆ ಕಾರ್ಯಕರ್ತರ ಜೊತೆಯಲ್ಲಿಯೇ ಉಪಹಾರ ಸೇವಿಸಿ ಗಮನ ಸೆಳೆದರು.ಜಯನಗರದ ವಿಷ್ಣುವರ್ಧನ್ ಪಾರ್ಕ್ ಬಳಿಯ ತಿಂಡಿ ಮನೆ ಹೋಟಲ್‍ನಲ್ಲಿ ಪ್ರಚಾರದ ಪ್ರಯುಕ್ತ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳ ಜೊತೆಗೆ ಉಪಾಹಾರ ಸೇವಿಸಿ ಅವರ ಉತ್ಸಾಹವನ್ನು ಹೆಚ್ಚಿಸಿದರು.

ಇನ್ನು, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಜೊತೆ ಪ್ರಚಾರದಲ್ಲಿ ತೊಡಗಿದ ತೇಜಸ್ವಿ ಸೂರ್ಯ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಜೊತೆ ಮುಕ್ತ ಮಾತುಕತೆ ನಡೆಸಿದರು.

ಶಾಹಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನ ಮಹಿಳಾ ನೌಕರರ ಜೊತೆ ಕಾರ್ಮಿಕರಿಗೆ ಧ್ವನಿಯಾಗುವ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮ ಮತ್ತು ಯೋಜನೆಗಳ ಬಗೆಗೆ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ