
ಕಲಬುರಗಿ, ಏ.10-ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಶಕ್ಕೆ ಪಡೆದಿದೆ.
ಸಾಕ್ಷಿ ವಿಚಾರಣೆ ವೇಳೆ ಬಾಬುರಾವ್ ಚಿಂಚನಸೂರ್ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್ನಿಂದ ವಾರೆಂಟ್ ಜಾರಿಯಾಗಿತ್ತು.
ವಾರೆಂಟ್ ವಾಪಸ್ಗೆ ಅರ್ಜಿ ಸಹ ಸಲ್ಲಿಸಿದ್ದರು. ಈ ನಡುವೆ ಅವರನ್ನು ಕೋರ್ಟ್ ವಶಕ್ಕೆ ಪಡೆದಿದೆ.
ಅಂಜನ್ ಶಾಂತವೀರ್ಗೆ ಬಾಬುರಾವ್ ಅವರು ನೀಡಿದ್ದ ಚೆಕ್ಬೌನ್ಸ್ ಆಗಿದ್ದು, 11.88 ಕೋಟಿ ರೂ.ಗಳ ಚೆಕ್ನ್ನು ನೀಡಲಾಗಿತ್ತು. ಈ ಚೆಕ್ ಬೌನ್ಸ್ ಆದ ಕಾರಣ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆಗೆ ಅವರು ಹಾಜರಾಗಿರಲಿಲ್ಲ.