ಪ್ರಚಾರದ ವೇಳೆ ನಾಗಿನ್ ಡ್ಯಾನ್ಸ್ ಮಾಡಿದ ಸಚಿವ ಎಂಟಿ.ಬಿ.ನಾಗರಾಜ್

ಹೊಸಕೋಟೆ, ಏ.10-ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಪ್ರಚಾರದ ವೇಳೆ ನಾಗಿನ್ ಡ್ಯಾನ್ಸ್ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಹೊಸಕೋಟೆ ವಿವಿಧೆಡೆ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಕಾರ್ಯಕರ್ತರ ಜೋಷ್‍ನಲ್ಲಿ ಮೈ ಮರೆತ ಸಚಿವರ ನೃತ್ಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು.

ನೋಡುನೋಡುತ್ತಿದ್ದಂತೆ ಅವರು ಕೈ ಮೇಲೆತ್ತಿ ಹಾವಿನ ಭಂಗಿಯಲ್ಲಿ ಮೈ-ಕೈ ಆಡಿಸಿದಾಗ ಅವರ ಸುತ್ತಲೂ ಇದ್ದ ಕೈ ಕಾರ್ಯಕರ್ತರು ತಾವೂ ಏನೂ ಕಮ್ಮಿ ಇಲ್ಲ ಎಂಬಂತೆ ಸುಮಾರು 5 ನಿಮಿಷಗಳವರೆಗೂ ಕುಣಿದು ಖುಷಿಪಟ್ಟರು.

ಅಲ್ಲಿ ನೆರೆದಿದ್ದವರಲ್ಲಿ ಕೆಲವರು ಈ ದೃಶ್ಯಾವಳಿಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಹರಿಬಿಟ್ಟಿದ್ದಾರೆ. ಈಗ ಎಲ್ಲೆಡೆ ಸಚಿವರ ಡ್ಯಾನ್ಸ್ ವೈರಲ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ