ಬೆಂಗಳೂರು, ಏ.10- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಸಾಧನೆಗಳನ್ನು ನಕಲು ಮಾಡಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿ ಟ್ವಿಟರ್ನಲ್ಲಿ ಟಾಂಗ್ ನೀಡಿರುವ ಅವರು, ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರ ಕಡಿಮೆ ಆದಾಯ ಇರುವ ಹಿರಿಯ ನಾಗರಿಕರಿಗೆ ಮಾಸಿಕ 600ರೂ. ಪಿಂಚಣಿ ನೀಡುತಿತ್ತು. ಮೈತ್ರಿ ಸರ್ಕಾರ ಅದನ್ನು 800ರೂ.ಗೆ ಹೆಚ್ಚಿಸಿದೆ. ಈಗ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆಯನ್ನು ಘೋಷಿಸಿದೆ.ನಾವು ಈಗಾಗಲೇ ಜಾರಿಗೊಳಿಸಿರುವ ಯೋಜನೆಯನ್ನು ಮೋದಿ ಅವರು ನಕಲು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
2013ರಲ್ಲಿ ನಮ್ಮ ಸರ್ಕಾರ ಮೂರು ಲಕ್ಷ ವರೆಗೂ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಒಂದು ಲಕ್ಷದವರೆಗೂ ಬಡ್ಡಿ ರಹಿತ ಕೃಷಿ ಸಾಲ ನೀಡುವುದಾಗಿ ಹೇಳಿಕೊಂಡಿದೆ.
ರಾಜ್ಯದಲ್ಲಿ 14ಸಾವಿರ ಕಿ.ಮೀ. ಗೂ ಹೆಚ್ಚಿನ ಗ್ರಾಮೀಣ ರಸ್ತೆಗಳನ್ನು ನಮ್ಮ ಹೊಲ- ನಮ್ಮ ದಾರಿ ಮತ್ತು ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳನ್ನು ನರೇಂದ್ರ ಮೋದಿ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಕಾಪಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಮೋದಿ ಮೇಲೆ ಮಳೆ ಹೂಯ್ದಂಗೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಪ್ರತಿಯಂದು ಟ್ವಿಟ್ನಲ್ಲಿ ಕಾಪಿ ಕಟ್ ಮೋದಿ ಎಂದು ಲೇವಡಿ ಮಾಡಲಾಗಿದೆ.