![sm kri](http://kannada.vartamitra.com/wp-content/uploads/2018/08/sm-kri-495x381.jpg)
ಮೈಸೂರು, ಏ.10- ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಪ್ರಚಾರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಮಾರ್ಮಿಕವಾಗಿ ನುಡಿದರು.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಯಾವತಿ ಮುಖ್ಯಮಂತ್ರಿಯಾಗಿದ್ದವರು.ಬಿಎಸ್ಪಿ ಮುಖ್ಯಸ್ಥರು, ಪ್ರಭಾವಿ ರಾಜಕಾರಣಿಯೂ ಆಗಿದ್ದಾರೆ. ಹಾಗಾಗಿ ಅವರು ಮೈಸೂರಿನಲ್ಲಿ ತಮ್ಮ ಪಕ್ಷದ ಸಮಾವೇಶ ನಡೆಸಿ ಪಕ್ಷದ ಅಭ್ಯರ್ಥಿಗಳನ್ನು ಒಟ್ಟು ಸೇರಿಸಿ ಪ್ರಚಾರ ಮಾಡುವುದು ಸಹಜ. ಅವರು ಪ್ರಚಾರ ಮಾಡುವುದರಿಂದ ಇತರೆ ಪಕ್ಷಗಳ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ ಯಾವ ಪಕ್ಷದ ಅಭ್ಯರ್ಥಿ ಮೇಲೆ ಹೆಚ್ಚು ಪ್ರಭಾವವಾಗಲಿದೆ ಎಂಬುದನ್ನು ಹೇಳುವುದು ಕಷ್ಟ ಎಂದರು.
ಇದೇ ವೇಳೆ ಎಸ್.ಎಂ.ಕೃಷ್ಣ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ಎದುರಾದ ಕಷ್ಟಗಳ ಬಗ್ಗೆ ಮೆಲುಕು ಹಾಕಿ ಯಾವೊಬ್ಬ ಮುಖ್ಯಮಂತ್ರಿಯೂ ಅನುಭವಿಸದ ಕಷ್ಟಗಳನ್ನು ನಾನು ಎದುರಿಸಿದ್ದೇನೆ. ನನಗೆ ಯಾಕೆ ಈ ಕಷ್ಟಗಳು ಬಂದಿತ್ತೋ ಗೊತ್ತಿಲ್ಲ. ದೇವರು ಕಷ್ಟಗಳನ್ನು ಎಲ್ಲರಿಗೂ ಹಂಚಬಹುದಿತ್ತು. ಆದರೆ ದೇವರು ನನಗೆ ಏಕೆ ಈ ಕಷ್ಟ ಕೊಟ್ಟ ಗೊತ್ತಿಲ್ಲ ಎಂದರು.