ಬೆಂಗಳೂರು, ಏ.10- ಚುನಾವಣೆ ಸಂದರ್ಭದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಹೋರಾಡಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಜ್ಜಾಗಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ವಿ.ಆರ್.ಮರಾಠ ಚುನಾವಣೆ ಸಂದರ್ಭದಲ್ಲಿ ವೋಟಿಗಾಗಿ ನೋಟು, ಹೆಂಡ, ಸೀರೆ, ಮೂಗುತಿ ಅಥವಾ ಇತ್ಯಾದಿಗಳನ್ನು ಯಾವುದೇ ವ್ಯಕ್ತಿ ಅಥವಾ ಇನ್ನೊಬ್ಬರ ಪರವಾಗಿ ಆಗಲಿ ಮತದಾರರಿಗೆ ಹಂಚುತ್ತಿರುವ ಸಂದರ್ಭದ ಘಟನೆಯನ್ನು ಮುಕ್ತವಾಗಿ ಹಾಗೂ ಗುಪ್ತವಾಗಿ ಕ್ಯಾಮೆರಾ ಮೊಬೈಲ್ನಲ್ಲಿ ಚಿತ್ರಿಸಿಕೊಂಡು ನಮಗೆ ತಲುಪಿಸಿದರೆ ಅಂತಹ ವಿಡಿಯೋ ಕಳುಹಿಸಿದ ಪ್ರಜ್ಞವಂತಾ ಮತ್ತು ದೇಶಪ್ರೇಮಿ ವ್ಯಕ್ತಿಗೆ ವೇದಿಕೆ ಹತ್ತು ಸಾವಿರ ರೂಪಾಯಿ ಬಹುಮಾನ ನೀಡುತ್ತದೆ ಎಂದರು.
ಆ ಸಾಕ್ಷ್ಯ ಆಧಾರದ ಮೇಲೆ ಭಾರತ ಚುನಾವಣಾ ಆಯೋಗಕ್ಕೆ ದೂರು ನೀಡಿ ಕಾನೂನು ಪ್ರಕ್ರಿಯೆ ಜರುಗುವಂತೆ ಮಾಡುತ್ತೇವೆ. ಇಂತಹ ವಿಡಿಯೋ ಮತ್ತು ಸಾಕ್ಷ್ಯವನ್ನು ಸಂಗ್ರಹಿಸಿದವರು ನಮ್ಮ ಸಹಾಯವಾಣಿ 8884277730 ಸಂಖ್ಯೆಗೆ ವಾಟ್ಸಾಪ್ ಮೂಲಕವಾಗಲಿ ಅಥವಾ ಇಮೇಲï ್ಚಟ್ಞಠಿZ್ಚಠಿ.್ಛಚಿಚ್ಛಿhಃಜಞZಜ್ಝಿ.್ಚಟಞಗೆ ಕಳುಹಿಸಬಹುದು.ಹೀಗೆ ಸಾಕ್ಷ್ಯಗಳನ್ನು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ತಿಳಿಸಿದರು.