ನಿನ್ನೆ ಚೆಪಾಕ್ ಅಂಗಳದಲ್ಲಿ ನಡೆದ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಧೋನಿ ಪಡೆ 7 ವಿಕೆಟ್ಗಳ ಜಯ ಪಡೆಯಿತು. ಚೆನ್ನೈ ತಂಡ ಕೋಲ್ಕತ್ತಾ ತಂಡವನ್ನ ಹೇಗೆ ಕಟ್ಟಿಹಾಕಿತು ಅನ್ನೋದನ್ನ ನೋಡೋಣ ಬನ್ನಿ.
ಡಿ.ಕೆ.ಗ್ಯಾಂಗ್ಗೆ ಶಾಕ್ ಕೊಟ್ಟ ದೀಪಕ್ ಚಹರ್
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಓಪನರ್ಸ್ಗಳಾದ ಕ್ರಿಸ್ ಲೀನ್ ಮತ್ತು ಸುನಿಲ್ ನರೈನ್ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಪೇಸರ್ ದೀಪಕ್ ಚಹರ್ ಮೊದಲ ಓವರ್ನಲ್ಲೆ ಕ್ರಿಸ್ ಲೀನ್ ವಿಕೆಟ್ ಪಡೆದು ಕಮಾಲ್ ಮಾಡಿದ್ರು.
ಪೆವಿಲಿಯನ್ ಪರೇಡ್ ನಡೆಸಿದ ಕೋಲ್ಕತ್ತಾ ತಂಡ
ಆರು ರನ್ ಗಳಿಸಿದ್ದ ಸುನಿಲ್ ನರೈನ್ ಹರ್ಭಜನ್ ಸಿಂಗ್ಗೆ ಬಲಿಯಾದ್ರು. ನಂತರ ಮೂರನೇ ಓವರ್ನಲ್ಲಿ ದಾಳಿಗಿಳಿದು ನಿತೀಶ್ ರಾಣಾ ಬಾರಿಸಿದ ಚೆಂಡನ್ನ ರಾಯ್ಡುಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದ್ರು. ನಂತರ ಐದನೇ ಓವರ್ನಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪಗೂ ಪೆವಿಲಿಯನ್ ದಾರಿ ತೋರಿಸಿದ್ರು.
ನಂತರ ಮಿಡ್ಲ್ ಆರ್ಡರ್ನಲ್ಲಿ ಬಂದ ಕ್ಯಾಪ್ಟನ್ ದಿನೇಶ್ ಕಾರ್ತಿಕ್ 19, ಶುಭಮನ್ ಗಿಲ್ 9 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು.
47 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಮತ್ತು ಪಿಯೂಶ್ ಚಾವ್ಲಾ ಆಸರೆಯಾದ್ರು. ಈ ಜೋಡಿ ಏಳನೇ ವಿಕೆಟ್ಗೆ 29 ರನ್ ಸೇರಿಸಿತು. ಆದರೆ 8 ರನ್ ಗಳಿಸಿದ್ದ ಚಾವ್ಲಾ ಧೋನಿಯ ಚುರುಕಿನ ಸ್ಟಂಪ್ ಔಟ್ಗೆ ಬಲಿಯಾದ್ರು.
ಅರ್ಧ ಶತಕ ಬಾರಿಸಿದ ಆ್ಯಂಡ್ರೆ ರಸ್ಸೆಲ್
ಕೋಲ್ಕತ್ತಾ ತಂಡ 9 ವಿಕೆಟ್ಗೆ 108 ರನ್
ಏಕಾಂಗಿ ಹೋರಾಟ ಮುಂದುವರೆಸಿದ ಆ್ಯಂಡ್ರೆ ರಸ್ಸೆಲ್ 44 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ರು.
ಕೊನೆಯಲ್ಲಿ ಕೋಲ್ಕತ್ತಾ ತಂಡ ನಿಗದಿತ ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ರಸ್ಸೆಲ್ 44 ಎಸೆತದಲ್ಲಿ 5 ಬೌಂಡರಿ 3 ಸಿಕ್ಸರ್ ಬಾರಿಸಿ ಅಜೇಯ 50 ರನ್ ಗಳಿಸಿದ್ರು.
108 ರನ್ಗಳನ್ನ ಬೆನ್ನತ್ತಿದ ಚೆನ್ನೈ ತಂಡಕ್ಕೆ ಒಳ್ಳೆಯ ಓಪನಿಂಗ್ ಸಿಗಲಿಲ್ಲ. ಓಪನರ್ ಶೇನ್ ವ್ಯಾಟ್ಸನ್ 17 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಸುರೇಶ್ ರೈನಾ ಕೂಡ ಹೆಚ್ಚು ಹೊತ್ತು ನಿಲ್ಲದೇ ನರೈನ್ಗೆ ಬಲಿಯಾದ್ರು.
ಆದರೆ ಮೂರನೇ ವಿಕೆಟ್ಗೆ ಜೊತೆಗೂಡಿದ ಫಾಫ್ ಡುಪ್ಲೆಸಿಸ್ ಮತ್ತು ಅಂಬಟಿ ರಾಯ್ಡು ಕೋಲ್ಕತ್ತಾ ಲೆಕ್ಕಚಾರಗಳನ್ನೆಲ್ಲ ತೆಲೆಕೆಳಗೆ ಮಾಡಿದ್ರು. ಈ ಜೋಡಿ ಮೂರನೇ ವಿಕೆಟ್ಗೆ 46 ಸೇರಿಸಿ ಗೆಲುವಿನ ಭರವಸೆ ನೀಡಿತು. ಆದರೆ 21 ರನ್ ಗಳಿಸಿದ್ದ ರಾಯ್ಡು ಚವ್ಲಾಗೆ ಬಲಿಯಾದ್ರು.
ನಂತರ ಫಾಫ್ ಡುಪ್ಲೆಸಿಸ್ ಅಜೇಯ 43 , ಕೇದಾರ್ ಜಾಧವ್ ಅಜೇಯ 8 ರನ್ ಗಳಿಸಿ ಇನ್ನು 16 ರನ್ ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ಚೆನ್ನೈ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.