
ಬೀದರ್ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮತ್ತೊಮ್ಮೆ ಗೆಲ್ಲಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಬುಧವಾರ ನಗರದ ಬಸವ ಶಕ್ತಿ ಕೇಂದ್ರದಲ್ಲಿ ಮತ್ತೇ ಕಮಲ ಅರಳಿಸಲು ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದರು. ಪ್ರತಿಯೊಂದು ಮನೆ, ಅಂಗಡಿಗಳಿಗೆ ತೆರಳುತ್ತಿರುವ ನಾಯಕರು, ಮೋದಿ ಸರ್ಕಾರದ ಸಾಧನೆ ಹಾಗೂ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಂಸದ ಭಗವಂತ ಖೂಬಾ ಮಾಡಿರುವ ಸಾಧನೆಗಳ ಚಿತ್ರಣವನ್ನು ಮತದಾರರು ಮುಂದೆ ಇಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಪ್ರಮುಖರು, ಕಾಂಗ್ರೆಸ್ ಪ್ರಣಾಳಿಕೆ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವಂತಿದೆ.
ಜನತೆ ಯಾರನ್ನು ಆಯ್ಕೆ ಮಾಡಬೇಕೆಂಬ ಗಟ್ಟಿ ನಿರ್ಧಾರ ತೆಗೆದುಕೊಂಡು, ಮತ್ತೆ ಮೋದಿ ಅವರಿಗೆ ಪ್ರಧಾನಿ ಮಾಡುವುದು ಖಚಿತ ಎಂದು ಹೇಳಿದರು.
ಬೀದರ್ ವಿಧಾನಸಭಾ ಕ್ಷೇತ್ರದ ಸಂಚಾಲಕ ಬಾಬು ವಾಲಿ ಮಾತನಾಡಿ, ಇದು ದೇಶ ಸಂರಕ್ಷಣೆಯ, ದೇಶದ ಸದೃಢತೆಯ ಚುನಾವಣೆಯಾಗಿದೆ. 2014ರಂತೆ ಈ ಬಾರಿಯೂ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದರು.
ಯುವ ಮುಖಂಡ ಜಗದೀಶ್ ಬಿರಾದಾರ ಮಾತನಾಡಿ, ಕಳೆದ ಬಾರಿ ಧರ್ಮಸಿಂಗ್ ಸೋಲಿಸಿದಂತೆ ಈ ಬಾರಿ ಈಶ್ವರ ಖಂಡ್ರೆ ಅವರ ಸೋಲು ನಿಶ್ಚಿತವಾಗಿದೆ. ಎಷ್ಟು ಮತಗಳ ಅಂತರದಿಂಗೆ ಬಿಜೆಪಿ ಗೆಲ್ಲಲಿದೆ ಎನ್ನುವುದಕ್ಕೆ ಚುನಾವಣೆ ನಡೆಯಬೇಕಿದೆ ಎಂದು ಹೇಳಿದರು.
ರಾಜಕುಮಾರ ಚಿದ್ರಿ, ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ಕಿರಣ ಪಾಲಂ, ಹಣಮಂತ ಬುಳ್ಳಾ, ವೀರು ದಿಗ್ವಾಲ್, ನಿಲೇಶ್ ರಕ್ಷಾಳ, ರಾಜು ಘಂಟಿ ಇತರರಿದ್ದರು.