
ಬೀದರ್. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಬಿಜೆಪಿ ಮಂಗಳವಾರ ತಾಲೂಕಿನ ಯರನಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡಿದರು.
ಪ್ರಮುಖರಾದ ಬಾಬು ವಾಲಿ, ಈಶ್ವರ ಸಿಂಗ್ ಠಾಕೂರ್, ವಿಜಯಕುಮಾರ ಪಾಟೀಲ್ ಗಾದಹಿ ಸೇರಿದಂತೆ ಇತರರು ಮನೆ, ಮನೆಗೆ ತೆರಳಿ ಐದು ಖೂಬಾ ಸಾಧನೆ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಈ ಬಾರಿಯೂ ಬಿಜೆಪಿಗೆ ಬೆಂಬಲಿಸುವ ಮೂಲಕ ಭಾರಿ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಬೀದರ್ ಜಿಲ್ಲೆಯಲ್ಲಿ ಇರುವಷ್ಟು ರಾಷ್ಟ್ರೀಯ ಹೆದ್ದಾರಿಗಳು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಈ ಹಿಂದೆ ಕೇವಲ ಒಂದು ಮಾತ್ರ ರಾಷ್ಟ್ರೀಯ ಹೆದ್ದಾರಿ ಇತ್ತು.
ಭಗವಂತ ಖೂಬಾ ತಮ್ಮ ಐದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರಿ ಮಾಡಿಸಿದ್ದಾರೆ. ಅಲ್ಲದೇ ಹೊಸ 13 ರೈಲು ಗಳನ್ನು ಸಹ ಮಂಜೂರಿ ಮಾಡಿಸಿದ ಶ್ರೇಯಸ್ಸು ಖೂಬಾ ಅವರಿಗೆ ಸಲ್ಲುತ್ತದೆ ಎಂದು ಬಾಬು ವಾಲಿ ಹೇಳಿದರು.
60 ವರ್ಷ ರಾಜಕೀಯ ಕೇಂದ್ರದಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್ ಜಾತಿಗಳ ನಡುವೆ ಜಗಳ ಹಚ್ಚಿ ಓಟ್ ಬ್ಯಾಂಕ್ ರಾಜಕೀಯ ಮಾಡಿದೆ. ವಿಶ್ವ ದಲ್ಲಿ ಭಾರದ ದೇಶವನ್ನು ಗುರುತಿಸು ಮಾಡಿರುವ ಶ್ರೇಯಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.