ವೆಸ್ಟ್ ಇಂಡೀಸ್ ಯುವ ವೇಗಿ ಅಲ್ಜರಿ ಜೋಸೆಫ್ ತಮ್ಮ ಮೊದಲ ಐಪಿಎಲ್ನಲ್ಲೆ ಕಮಾಲ್ ಮಾಡಿದ್ದಾರೆ. ಬದಲಿ ಆಟಗಾರನಾಗಿ ಕಲರ್ಫುಲ್ ಟೂರ್ನಿ ಆಡಲು ಬಂದ ಈ ವಿಂಡೀಸ್ ಆಟಗಾರ ಡೆಬ್ಯು ಪಂದ್ಯದಲ್ಲೆ ವಿಕೆಟ್ಗಳ ಗೊಂಚಲು ಪಡೆದು ಇಂಪ್ರೆಸ್ ಮಾಡಿದ್ದಾರೆ.
ಮೊನ್ನೆ ಉಪ್ಪಾಳ್ ಅಂಗಳದಲ್ಲಿ ಆತಿಥೇಯ ಸನ್ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಯಂಗ್ ಪೇಸರ್ ಜೋಸೆಫ್ ಜಸ್ಟ್ 22 ವರ್ಷ. ಸನ್ರೈಸರ್ಸ್ ವಿರುದ್ಧದ ಮೊದಲ ಪಂದ್ಯದಲ್ಲೆ ತಾನೊಬ್ಬ ಎಂಥ ಬೌಲರ್ ಪ್ರೂವ್ ಮಾಡಿ ದಾಖಲೆ ಬರೆದಿದ್ದಾರೆ.
ಮೊದಲ ಎಸೆತದಲ್ಲೆ ವಿಕೆಟ್ ಪಡೆದ ಜೋಸೆಫ್
ಸನ್ರೈಸರ್ಸ್ ವಿರುದ್ಧ 5ನೇ ಓವರ್ನಲ್ಲಿ ದಾಳಿಗಿಳಿದ ಜೋಸೆಫ್ ಮೊದಲ ಎಸೆತದಲ್ಲೆ ವಿಕೆಟ್ ಪಡೆದು ಐಪಿಎಲ್ನಲ್ಲಿ ಒಳ್ಳೆಯ ಎಂಟ್ರಿಕೊಟ್ರು. ಜೋಸೆಫ್ ಅವರ ಮೊದಲ ಎಸೆತದ ವೇಳೆ ಸ್ಟ್ರೈಕ್ನಲ್ಲಿದ್ದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್ ಆದ್ರು. ಇದರೊಂದಿಗೆ ಜೋಸೆಫ್ ಅಪರೂಪದ ಸಾಧನೆ ಮಾಡಿ ಮೊದಲ ಓವರ್ನ್ನ ಮೇಡನ್ ಮಾಡಿದ್ರು. ನಂತರ ವಿಜಯ್ ಶಂಕರ್, ದೀಪಕ್ ಹೂಡಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್ ಮತ್ತು ಸಿದ್ದಾರ್ಥ್ ಕೌಲ್ ಭೇಟಿ ಮಾಡಿದ್ರು.
6 ವಿಕೆಟ್ ಪಡೆದ ಮುಂಬೈನ ಕೂಲ್ ವೇಗಿ
ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಜೋಸೆಫ್ ನಿನ್ನೆ ಸನ್ರೈಸರ್ಸ್ ವಿರುದ್ಧ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮಿಂಚಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ ಪಾಲಿನ ಹೀರೋ ಆದ್ರು. ಅಲ್ಲದೇ ಐಪಿಎಲ್ನಲ್ಲಿ ಬೆಸ್ಟ್ ಬೌಲಿಂಗ್ ಫಿಗರ್ ಹೊಂದಿದ್ದ ಪಾಕಿಸ್ತಾನದ ಬೌಲರ್ ಸೊಹೆಲ್ ತನ್ವೀರ್ ದಾಖಲೆ ಮುರಿದ್ರು. ಐಪಿಎಲ್ ಮೊದಲ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ಪ ಆಡಿದ್ದ ತನ್ವೀರ್, ಸಿಎಸ್ಕೆ ವಿರುದ್ಧ 4 ಓವರ್ ಬೌಲ್ ಮಾಡಿ 14 ರನ್ಗೆ 6 ವಿಕೆಟ್ ಪಡೆದಿದ್ದೇ ಐಪಿಎಲ್ನಲ್ಲಿ ಈವರೆಗಿನ ಬೆಸ್ಟ್ ಬೌಲಿಂಗ್ ಫಿಗರ್ ಆಗಿತ್ತು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 40 ರನ್ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ಮುಂಬೈ ವೇಗಿ ಅಲ್ಜಾರಿ ಜೊಸೆಫ್. ಮುಂಬೈ ಬ್ಯಾಟ್ಸ್ಮನ್ಗಳು ತಿಣುಕಾಡಿ 137 ರನ್ ಟಾರ್ಗೆಟ್ ನೀಡಿದರು. ತವರಿನಲ್ಲಿ Sಖಊ ತಂಡಕ್ಕೆ ಇದು ಸುಲಭ ಟಾರ್ಗೆಟ್. ಘಟಾನುಘಟಿ ಬ್ಯಾಟ್ಸ್ಮನ್ಗಳನ್ನ ಹೊಂದಿರುವ Sಖಊ ತಂಡ 96 ರನ್ಗೆ ಆಲೌಟ್ ಆಯಿತು.
ಮುಂಬೈ ಇಂಡಿಯನ್ಸ್ ವೇಗಿ ಅಲ್ಜಾರಿ ಜೊಸೆಫ್ 12 ರನ್ ನೀಡಿ 6 ವಿಕೆಟ್ ಕಬಳಿಸಿ ಮುಂಬೈ ಗೆಲುವಿನ ರೂವಾರಿಯಾದರು. ಇಷ್ಟೇ ಅಲ್ಲ ಐಪಿಎಲ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಲ್ಜಾರಿ ಜೊಸೆಫ್ ಬೌಲಿಂಗ್ ಸರ್ವಶ್ರೇಷ್ಠ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2008ರಲ್ಲಿ ಪಾಕಿಸ್ತಾನ ವೇಗಿ ಸೊಹೈಲ್ ತನ್ವೀರ್(ರಾಜಸ್ಥಾನ ರಾಯಲ್ಸ್) ಅSಏ ವಿರುದ್ಧ 14 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ ಇದೀಗ ಈ ದಾಖಲೆ ಪುಡಿಯಾಗಿದೆ.
2016ರಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಸನ್ರೈಸರ್ಸ್ ವಿರುದ್ಧ ವಿರುದ್ಧ 19 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನಿಲ್ ಕುಂಬ್ಳೆ, ರಾಜಸ್ಥಾನ ರಾಯಲ್ಸ್ ವಿರುದ್ಧ 5 ರನ್ ನೀಡಿ 5 ವಿಕೆಟ್ ಪಡೆದಿದ್ರು.
ಅಲ್ಜಾರಿ ಜೊಸೆಫ್ 22ರ ಹರೆಯದ ಯುವಕ. ಆ್ಯಂಟಿಗುವಾದಲ್ಲಿ ಹುಟ್ಟಿದ ಜೊಸೆಫ್ 2016ರಲ್ಲಿ ವೆಸ್ಟ್ಇಂಡೀಸ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ವಿಶೇಷ ಅಂದರೆ ವಿಂಡೀಸ್ ತಂಡ ಕಂಡ ಕೂಲ್ ವೇಗಿ ಅಲ್ಜಾರಿ ಜೊಸೆಫ್. ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಜೊಸೆಫ್, ವಿಂಡೀಸ್ ಪರ 9 ಟೆಸ್ಟ್, 15 ಏಕದಿನ ಪಂದ್ಯ ಆಡಿದ್ದಾರೆ. ಆ್ಯಡಮ್ ಮಿಲ್ನೆ ಇಂಜುರಿ ಕಾರಣದಿಂದ ಟೂರ್ನಿ ಆರಂಭದಲ್ಲೇ ತಂಡದಿಂದ ಹೊರಬಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ವಿಂಡೀಸ್ ವೇಗ್ ಅಲ್ಜಾರಿ ಜೊಸೆಫ್ ಆಯ್ಕೆ ಮಾಡಿಕೊಂಡಿತು.
ಐಪಿಎಲ್ ನಿಯಮದ ಪ್ರಕಾರ, ಬದಲಿ ಆಟಗಾರನ ಆಯ್ಕೆ ಮಾಡುವಾಗ ಮೂಲ ಆಟಗಾರನ ಖರೀದಿ ಬೆಲೆಯನ್ನೇ ನೀಡಬೇಕು. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ನೀಡುವಂತಿಲ್ಲ. ಹರಾಜಿನಲ್ಲಿ ಆ್ಯಡಮ್ ಮಿಲ್ನೆಗೆ 75 ಲಕ್ಷ ರೂಪಾಯಿ ನೀಡಿ ಮುಂಬೈ ಖರೀದಿಸಿತ್ತು. ಮಿಲ್ನೆ ಅಲಭ್ಯರಾದ ಕಾರಣ ಜೊಸೆಫ್ಗೆ ಅವಕಾಶ ನೀಡಲಾಯಿತು. ಹೀಗಾಗಿ ಕೇವಲ 75 ಲಕ್ಷ ರೂಪಾಯಿಗೆ ತಂಡ ಸೇರಿಕೊಂಡ ಜೊಸೆಫ್ ಮೊದಲ ಐಪಿಎಲ್ ಪಂದ್ಯದಲ್ಲೇ 6 ವಿಕೆಟ್ ಕಬಳಿಸಿ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಒಟ್ನಲ್ಲಿ ಬದಲಿ ಆಟಗಾರನಾಗಿ ಬಂದ ಅಲ್ಜರಿ ಜೋಸೆಫ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದು ಸಂಚಲನ ಸೃಷ್ಟಿಸಿದ್ದಾರೆ.