ಡೆಲ್ಲಿ ಹುಡುಗರೆದ್ರು ಸೋಲು ಕಂಡಿತು ಆರ್ಸಿಬಿ : ಕ್ಯಾಚ್ ಕೈಚೆಲ್ಲಿ ಗೆಲುವನ್ನ ಕೈಚೆಲ್ಲಿದ್ರು ಪಾರ್ಥಿವ್

ಆರ್ಸಿಬಿ ಹಣೆಬರಹ ಕೊನೆಗೂ ಬದಲಾಗಲಿಲ್ಲ. ತವರಿನಲ್ಲಿ ಗ್ರೀನ್ ಜೆರ್ಸಿಯೊಂದಿಗೆ ಕಣಕ್ಕಿಳಿದ ಆರ್ಸಿಬಿ ಡೆಲ್ಲಿ ಹುಡುಗರೆದ್ರೂ ಕೂಡ ಸೋಲು ಕಂಡ್ರು. ಹಾಗಾದ್ರೆ ಬನ್ನಿ ಆರ್ ಸಿಬಿ ಸೋತಿದ್ದು ಹೇಗೆ ಅನ್ನೋದನ್ನ ತೋರಿಸ್ತೀವಿ ನೋಡಿ.

ಆರಂಭದಲ್ಲೆ ಎಡವಿದ ರಾಯಲ್ ಚಾಲೆಂಜರ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ತಂಡಕ್ಕೆ ತಂಡಕ್ಕೆ ಓಪರ್ಸ್ಗಳಾಗಿ ಕಣಕ್ಕಿಳಿದ ಕ್ಯಾಪ್ಟನ್ ಕೊಹ್ಲಿ ಮತ್ತು ಪಾರ್ತೀವ್ ಪಟೇಲ್ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಇನ್ನಿಂಗ್ಸ್ ಕಟ್ಟುತ್ತಿದ್ದ ಓಪನರ್ ಪಾರ್ಥಿವ್ ಪಟೇಲ್ 9 ರನ್ ಗಳಿಸಿದ್ದಾಗ ಮೊರೀಸ್ ಎಸೆತದಲ್ಲಿ ಲಾಮಿಚ್ಚನೆಗೆ ಕ್ಯಾಚ್ ನೀಡಿ ಹೊರ ನಡೆದ್ರು.

ಎಬಿಡಿ, ಕೊಹ್ಲಿಗೆ ಪೆವಿಲಿಯನ್ ದಾರಿ ತೋರಿಸಿದ ರಬಾಡ
ನಂ.3ಯಲ್ಲಿ ಬಂದ ಮಿಸ್ಟರ್ 360 ಎಬಿಡಿ ವಿಲಿಯರ್ಸ್ 17 ರನ್ ಗಳಿಸಿದ್ದಾಗ ಪೇಸರ್ ಕಗಿಸೋ ರಬಾಡ ಪೆವಿಲಿಯನ್ ದಾರಿ ತೋರಿಸಿದ್ರು. ಆಗಷ್ಟೆ ಕ್ರೀಸ್ಗೆ ಬಂದಿದ್ದ ಸ್ಟೋಯ್ನಿಸ್ 15 ರನ್ ಗಳಿಸಿ ಅಕ್ಷರ್ ಪಟೇಲ್ ಗೆ ಬಲಿಯಾದ್ರು.

ನಾಲ್ಕನೆ ವಿಕೆಟ್ಗೆ ಜೊತೆಗೂಡಿದ ಆಲ್ರೌಂಡರ್ ಮೊಯಿನ್ ಅಲಿ ಕ್ಯಾಪ್ಟನ್ ಕೊಹ್ಲಿಗೆ ಒಳ್ಳೆಯ ಸಾಥ್ ಕೊಟ್ರು. ಆದರೆ ಕೆಲವೋತ್ತು ಈ ಜೋಡಿಡೆಲ್ಲಿ ಬೌಲರ್ಸ್ಗಳ ಬೆವರಿಳಿಸಿದ್ರು. ಆದರೆ 32 ರನ್ಗಳಿಸಿದ್ದ ಮೊಯನ್ ಅಲಿ ಲಾಮಿಚಾನ್ನೆ ಸ್ಪಿನ್ಗೆ ಬಲಿಯಾದ್ರು ಇದಾದ ಕೆಲವೇ ಹೊತ್ತಿನಲ್ಲಿ ಅರ್ಧ ಶತಕದತ್ತ ಮುನ್ನಗುತ್ತಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ರಬಾಡ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ಕೊಡಿಸುವಲ್ಲಿ ಸಕ್ಸಸ್ ಆದ್ರು.

ಆರ್ ಸಿಬಿ ನಿಗದಿತ ಓವರ್ನಲ್ಲಿ 8 ವಿಕೆಟ್ಗೆ 149 ರನ್
ಕೊನೆಯಲ್ಲಿ ಬಂದ ಆಕಾಶ್ ದೀಪ್ 19, ಟಿಮ್ ಸೌತಿ ಅಜೇಯ 9, ಚಹಲ್ ಅಜೇಯ 1 ರನ್ ಗಳಿಸಿದ್ರು. ಆರ್ಸಿಬಿ ನಿಗದಿತ ಓವರ್ನಲ್ಲಿ 8 ವಿಕೆಟ್ಗೆ 149 ರನ್ ಗಳಿಸಿತು. ಡೆಲ್ಲಿ ಪರ ಪೇಸರ್ ರಬಾಡ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು.

ಡೆಲ್ಲಿಗೆ ಮೊದಲ ಶಾಕ್ ಕೊಟ್ಟ ಟಿಮ್ ಸೌಥಿ
150 ರನ್ಗಳ  ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ತಂಡ ಆರಂಭಿಕ ಆಘಾತ ಅನುಭವಿಸಿತು. ಓಪನರ್ ಶಿಖರ್ ಧವನ್ ಸೌಥಿ ಎಸೆತದಲ್ಲಿ ಸೈನಿಗೆ ಕ್ಯಾಚ್ ಕೊಟ್ಟು ಡಕೌಟ್ ಆದ್ರು. ಇದಾದ ಕೊನೆಯ ಎಸೆತದಲ್ಲಿ ಶ್ರೇಯಸ್ ನೀಡಿದ ಕ್ಯಾಚ್ನ್ನ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಕ್ಯಾಚ್ ಕೈಚೆಲ್ಲಿದ್ರು.

ನಂ.3ಯಲ್ಲಿ ಬಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಜೊತೆಗೂಡಿದ ಪೃಥ್ವಿ ಸೌಥಿ ಅವರ ಮೂರನೇ ಓವರ್ನಲ್ಲಿ ನಾಲ್ಕು ಬೌಂಡರಿ ಬಾರಿಸಿ ಸುರಿಮಳೆ ಗೈದ್ರು. ಆದರೆ 28 ರನ್ಗಳಿಸಿದ್ದ ಪೃಥ್ವಿ ಶಾ ಪವನ್ ನೇಗಿಗೆ ಬಲಿಯಾದ್ರು. ಇನ್ಗ್ರಾಂ ಕೂಡ ಹೆಚ್ಚು ಹೊತ್ತು ನಿಲ್ಲದೇ 22 ರನ್ ಮೊಯಿನ್ ಅಲಿ ಬಲೆಗೆ ಬಿದ್ರು. ನಾಲ್ಕನೆ ವಿಕೆಟ್ಗೆ ಶ್ರೇಯಸ್ ಜೊತೆಗೂಡಿದ ಪಂತ್ ಪಂದ್ಯವನ್ನ ಗೆಲುವಿನ ಸಮೀಪಕ್ಕೆ ಸಾಗಿಸಿದ್ರು. ಕೊನೆಯಲ್ಲಿ ಅಕ್ಷರ್ ಪಟೇಲ್ ಮತ್ತು ತೇವಾಟಿಯಾ 7 ಎಸೆತ ಬಾಕಿ ಇರುವಂತೆ ತಂಡವನ್ನಗೆಲುವಿನ ದಡ ಸೇರಿಸಿದ್ರು.

ಇದರೊಂದಿಗೆ ಆರ್ಸಿಬಿ ಸತತ ಆರನೇ ಸೋಲು ಕಂಡು ಪ್ಲೇ ಆಫ್ನಿಂದ ಬಹುತೇಕ ಹೊರಬಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ